ಬಾಲ್ಯದ ಸಹಪಾಠಿ ಮುನಿಯಾಲು ರಾಜೇಶ್ ಪೈ ದಂಪತಿಗಳಿಗೆ ಬಲ್ಲಾಡಿಯಲ್ಲಿ ಸನ್ಮಾನ

0
22

ಹೆಬ್ರಿ : ಮುನಿಯಾಲು ಕೆ. ಪಿ. ಎಸ್.ಪ್ರೌಢಶಾಲೆಯ ಹಿರಿಯ ವಿದ್ಯಾರ್ಥಿ ರಾಜೇಶ್ ಪೈ ದಕ್ಷಿಣ ಆಫ್ರಿಕದಲ್ಲಿ ನೆಲೆಸಿ ಔಷಧೀಯ ಉದ್ಯಮ ಕ್ಷೇತ್ರದಲ್ಲಿ ನಡೆಸಿದ ವಿಶಿಷ್ಟ ಸಾಧನೆಗಾಗಿ ಮಣಿಪಾಲ ಮಾಹೆ ವಿಶ್ವವಿದ್ಯಾಲಯ ವತಿಯಿಂದ ನೀಡಿದ ಪ್ರತಿಷ್ಠಿತ ರಾಷ್ಟ್ರೀಯ ಸಿಜಿಎಂಪಿ ಅವಾರ್ಡ್ ಪಡೆದಿರುವುದಕ್ಕೆ ಸಂತಸ ವ್ಯಕ್ತಪಡಿಸಿ 1991-92 ನೆ ಸಾಲಿನ ಸಹಪಾಠಿಗಳು ಮುದ್ರಾಡಿ ಗ್ರಾಮದ ಬಲ್ಲಾಡಿ ಮಠದಲ್ಲಿ ಸೇರಿ ರಾಜೇಶ್ ಪೈ ದಂಪತಿಗಳನ್ನು ಗೌರವಿಸಿ, ಸನ್ಮಾನಿಸಿದರು.

ಸಹಪಾಠಿಗಳಾದ ಕೃಷ್ಣಕಾಂತ್ ನಾಯಕ್, ದಿನೇಶ್ ಶೆಟ್ಟಿ ಮುಟ್ಲುಪಾಡಿ, ರವಿ ಶೆಟ್ಟಿ ಮುಟ್ಲುಪಾಡಿ, ನಾಗರಾಜ್ ಪೈ ಮುಳ್ಕಾಡು ರಾಜೇಶ್ ಪೈ ಯವರೊಂದಿಗೆ ಕಳೆದ ಕ್ಷಣಗಳನ್ನು, ಅವರ ಸಾಧನೆಗಳನ್ನು ಮೆಚ್ಚಿ ಮಾತನಾಡಿದರು.ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರಾಜೇಶ್ ಪೈ ನನ್ನ ಸಾಧನೆಗೆ ನಾನು ಕಲಿತ ಶಾಲೆ ಹಾಗೂ ಕಲಿಸಿದ ಗುರುಗಳು, ಗುರುಹಿರಿಯರ ಆಶೀರ್ವಾದ ಹಾಗೂ ಸಹಪಾಠಿಗಳ ಪ್ರೋತ್ಸಾಹವೇ ಕಾರಣವಾಗಿದೆ.ದಕ್ಷಿಣ ಆಫ್ರಿಕ ದಲ್ಲಿ ನೆಲೆಸಿದ್ದರೂ ತವರು ಜಿಲ್ಲೆಯ ಮಣಿಪಾಲ ಮಾಹೆ ವಿಶ್ವವಿದ್ಯಾಲಯದಲ್ಲಿ ಗೌರವ ದೊರಕಿರುವುದು ಹಾಗೂ ಸಹಪಾಠಿಗಳು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಅತ್ಯಂತ ಸಂತೋಷಪಡುತ್ತೇನೆ. ನನ್ನ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ದೊರಕಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.ವೇದಿಕೆಯಲ್ಲಿ ಮಧುಸೂದನ್ ಭಟ್, ರಾಜೇಶ್ ಪೈಯವರ ಪತ್ನಿ ವನಿತಾ, ಪುತ್ರಿ ಸಾಫ್ಟ್ ವೇರ್ ಇಂಜಿನಿಯರ್ ರಕ್ಷಾ, ರಮ್ಯಾ ಭಟ್ ಬಲ್ಲಾಡಿ, ಶುಭಧರ ಪೈ ಹೆಬ್ರಿ ,ಇಂಪನಾ ಭಟ್ ಬಲ್ಲಾಡಿ ಉಪಸ್ಥಿತರಿದ್ದರು. ಸಹಪಾಠಿ ಅಶೋಕ್ ಪೂಜಾರಿ ಮುದ್ರಾಡಿ ಪ್ರಾಸ್ತಾವಿಕ ಮಾತುಗಳೊಂದಿಗೆ, ಸ್ವಾಗತಿಸಿದರು. ಸಹಪಾಠಿ ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿ, ಸಹಪಾಠಿ ರೇವತಿ ನಾಯಕ್ ಕಡ್ತಲ ವಂದಿಸಿದರು.