ಕಲಾಕುಂಚದಿಂದ ಕವನ ಸಂಕಲನಕ್ಕೆ ಕವನಕ್ಕೆ ಆಹ್ವಾನ

0
120

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಈಗಾಗಲೇ “ಕಾವ್ಯ ಕುಂಚ” ಕವನ ಸಂಕಲನ ಭಾಗ 1, 2, 3, 4, 5 ಲೋಕಾರ್ಪಣೆ ಆಗಿದ್ದು ಈ ಕಾವ್ಯ ಕುಂಚದ 6ನೇ ಭಾಗದ ಕವನ ಸಂಕಲನಕ್ಕೆ ಮುದ್ರಣಕ್ಕೆ ಪೂರ್ಣ ಪ್ರಮಾಣದಲ್ಲಿ ಸಿದ್ದವಾಗಿದೆ.
ಕವನ ಬರೆಯುವ ಆಸಕ್ತರು ವಿಷಯ ಆಯ್ಕೆಯೊಂದಿಗೆ 15 ರಿಂದ 20 ಸಾಲುಗಳಲ್ಲಿ ಕವನ ರಚಿಸಿ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ತಮ್ಮ ಆಕರ್ಷಕವಾದ ಭಾವಚಿತ್ರ, ಮನೆಯ ಪೂರ್ಣ ಪ್ರಮಾಣದ ವಿಳಾಸ ಪಿನ್‌ಕೋಡ್ ಸಂಖ್ಯೆ, ವ್ಯಾಟ್ಸಪ್ ಸಂಖ್ಯೆ ದಿನಾಂಕ 31-12-2025 ರೊಳಗೆ ಕಳಿಸಬೇಕು ಎಂದು ಕಾವ್ಯಕುಂಚ ಕವನ ಸಂಕಲನದ ಪ್ರಧಾನ ಸಂಪಾದಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕವನ ಕಳಿಸಿದವರಿಗೆ ಕಾವ್ಯ ಕುಂಚದ 5ನೇ ಭಾಗದ ಕವನ ಸಂಕಲನ ಉಚಿತವಾಗಿ ನಿಮ್ಮ ವಿಳಾಸಕ್ಕೆ ಅಂಚೆ ಮೂಲಕ ಕಳಿಸುತ್ತೇವೆ. ಕವನ ರಚಿಸಿ ಕಳಿಸುವ ವ್ಯಾಟ್ಸಪ್ ಸಂಖ್ಯೆ 9538732777 ಹೆಚ್ಚಿನ ಮಾಹಿತಿಗೆ ಈ ಸನೀಹವಾಣಿಗೆ ಸಂಪರ್ಕಿಸಬಹುದು ಎಂದು ಕಲಾಕುಂಚ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here