ವೈದ್ಯಕೀಯ ಸಾಹಿತ್ಯ, ಸಾಮಾಜಿಕ ಸೇವೆ ಮತ್ತು ವೈದ್ಯಕೀಯ ವೃತ್ತಿಯಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ, 2025ನೇ ಸಾಲಿನ ವಿಶೇಷ ಸಾಧಕ ಪುರಸ್ಕಾರವನ್ನು ಡಾ| ಮುರಲೀ ಮೋಹನ್ ಚೂಂತಾರ್‌ರವರಿಗೆ ಇತ್ತೀಚೆಗೆ ವಿಯೆಟ್ನಾಂದೇಶದಂತಹ.ಬೆ.ಮಿನ್ ನಗರದಲ್ಲಿ ಪ್ರದಾನ ಮಾಡಲಾಯಿತು. ನವೆಂಬರ್ 13ರಿಂದ 15ರವರೆಗೆ ವಿಯೆಟ್ನಾಂದೇಶದ ಹೂ ಚಿಮಿನ್ ನಗರದಲ್ಲಿ ನಡೆದಇಂಡಿಯಾ– ವಿಯೆಟ್ನಾಂ ವ್ಯಾವಹಾರಿಹ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವಿಯೆಟ್ನಾದೇಶದಲ್ಲಿ ಭಾರತದರಾಯಭಾರಿಯಾಗಿರುವ ಶ್ರೀ ಮಹೇಶ್‌ಚಂದಗಿರಿಅವರು ಈ ಪ್ರಶಸ್ತಿ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿಕನ್ನಡ ಪ್ರಭ ಮತ್ತು ಸುವರ್ಣ ಟಿವಿ ಇದರ ಮುಖ್ಯ ಸಂಪಾದಕರು ಹಾಗೂ ಸಂಚಾಲಕರಾದ ಶ್ರೀ ರವಿ ಹೆಗಡೆಯವರು ಉಪಸ್ಥಿತರಿದ್ದರು. ಕನ್ನಡ ಪ್ರಭಾ ಮತ್ತು ಸುವರ್ಣ ಸುದ್ದಿ ಈ ಕಾರ್ಯಕ್ರಮವನ್ನುಜಂಟಿಯಾಗಿ ಆಯೋಜಿಸಿತ್ತು. ಹೂ.ಚಿ.ಮಿನ್ ನಗರದಈಶ್ವಟೋರಿಯಲ್ ಹೋಟಲಿನಲ್ಲಿ ಈ ಅದ್ಧೂರಿ ಸಮಾರಂಭಜರಗಿತು. ವೈದ್ಯಕೀಯ ಸಾಹಿತ್ಯಕ್ಷೇತ್ರದಲ್ಲಿ ಸಾವಿರಾರು ಲೇಖನಗಳನ್ನು ಬರೆದು ಜನಪ್ರಿಯ ವೈದ್ಯ ಸಾಹಿತಿ ಎಂದು ಡಾ| ಚೂಂತಾ ರುರಾಜ್ಯದಾದ್ಯಂತ ಗುರುತಿಸಿಕೊಂಡಿದ್ದಾರೆ. ಇದಲ್ಲದೆ ಹತ್ತು ವರುಷಗಳ ಕಾಲ ದ.ಕ.ಜಿಲ್ಲಾ ಗೃಹರಕ್ಷಕದಳದ ಸಮಾದೋಪರಾಗಿ ನಿಷ್ಣಾತ ಸೇವೆ ಸಲ್ಲಿಸಿ, ಮುಖ್ಯಮಂತ್ರಿಗಳ ಚಿನ್ನದ ಪದಕ ಮತ್ತು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕಕ್ಕೂ ಬಾಜನರಾಗಿದ್ದಾರೆ. ಸುಮಾರು 16 ವೈದ್ಯಕೀಯ ಸಾಹಿತ್ಯ ಕೃತಿಗಳನ್ನು ಬರೆದು ಪ್ರಕಟಿಸಿರುತ್ತಾರೆ. ಕಳೆದು 30 ವರುಷಗಳಿಂದ ಮಂಜೇಶ್ವರದ ಹೊಸಂಗಡಿ ಎಂಬಲ್ಲಿ ಗ್ರಾಮೀಣ ಪ್ರದೇಶದಲ್ಲಿ ವಿಶ್ವದರ್ಜೆಯರಾಸ ಚಿಕಿತ್ಸೆ ನೀಡಿ ಜನಾನುರಾಗಿದಂತ ವೈದ್ಯ ಮತ್ತು ಶಸ್ತ್ರತ್ಸಕ ಎಂದು ಗುರುತಿಸಿಕೊಂಡಿದ್ದಾರೆ. ಮಂಗಳೂರಿನ ನಿವಾಸಿಯಾಗಿರುವ ಶ್ರೀಯುತರು ತಮ್ಮತಾಯಿ ದಿವಂಗತಚೂAತಾರು ಸರೋಜಿನಿ ಭಟ್ ಅವರ ನೆನಪಿನಲ್ಲಿ ಪ್ರತಿಷ್ಠಾನ ನಡೆಸುತ್ತಿದ್ದು, ನೂರಾರು ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ ನಡೆಸಿ, ಉತ್ತಮ ಸಂಘಟಕಎAದೂ ಗುರುತಿಸಿಕೊಂಡಿದ್ದಾರೆ. ಇವರ ಸಾಮಾಜಿಕ, ವೈದ್ಯಕೀಯ ಮತ್ತು ಸಾಹಿತ್ಯಕ್ಷೇತ್ರದ ಸಾಧನೆಯನ್ನು ಕನ್ನಡ ಪ್ರಭ ಗುರುತಿಸಿ ಗೌರವಿಸಿರುತ್ತದೆ.

