ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವರ ಸನ್ನಿಧಿಯಲ್ಲಿ ಅನಂತ ಚತುರ್ದಶಿ ಪೂಜೆ

0
18

ಬೆಳಾಲು ಗ್ರಾಮದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವರಿಗೆ ಅನಂತ ಚತುರ್ದಶಿ (ನೋoಪು) ಪೂಜೆ ಮತ್ತು ಲಕ್ಷ ತುಳಸಿ ಅರ್ಚನೆ,ರಂಗಪೂಜೆ, ಪ್ರಸಾದ ವಿತರಣೆ, ದೇವಾಲಯದ ಮಹಾಪೋಷಕರಾದ ಉದ್ಯಮಿ ಲಕ್ಷ್ಮೀ ಗ್ರೂಪ್ ಮೋಹನ್ ಕುಮಾರ್ ರವರಿಗೆ ಗೌರವಾರ್ಪಣೆ, ಊರವರು ಹಾಗೂ ಕಲಾನಿಧಿ ರಾಜ್ಯ ಪ್ರಶಸ್ತಿ ವಿಜೇತೆ,ಬಹುಮುಖ ಪ್ರತಿಭೆ ಸಿಂಚನ ಪಿ. ರಾವ್ ಉಜಿರೆ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಬೆಳಾಲು : ಸೆ. 25 ಬೆಳಾಲು ಅನಂತೋಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಾದಗಳೊಂದಿಗೆ ಸಪ್ಟಂಬರ್ 25 ರಂದು ಅನಂತ ಚತುರ್ದಶಿ ಕಾರ್ಯಕ್ರಮದ ಅಂಗವಾಗಿ ದೇವರಿಗೆ ಪಂಚಾಮೃತ ಅಭಿಷೇಕ ಪವಮಾನ ಕಳಶಾಭಿಷೇಕ ಕಲ್ಪೋಕ್ತ ಪೂಜೆ ನಡೆದು, ಸುಮಾರು 60 ಋತ್ವಿಜ ರಿಂದ ಲಕ್ಷ ತುಳಸಿ ಅರ್ಚನೆ ಪೂಜಾ ಕಾರ್ಯ ನಡೆದು ಈ ಸಂದರ್ಭದಲ್ಲಿ ಜನಾರ್ಧನ ದೇವಸ್ಥಾನದ ಅನುವಂಶಿಕ ಮೊಕ್ತೆಸರರಾದ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ದೇವಾಲಯದ ನಿವೃತ್ತ ಮಣೆಗಾರರಾದ ಅನಂತಪದ್ಮನಾಭ, ವಸಂತ ಮಣೆಗಾರರು ಅರ್ಚಕರಾದ ಸಂತೋಷ್ ಕಲ್ಲೂರಾಯ, ಶ್ರೀಪತಿ ಎಳ್ಚಿತ್ತಾಯ, ಗಣೇಶ್ ತಂತ್ರಿದಾರರು ನಡೆಸಿಕೊಟ್ಟರು ನಂತರ ಕ್ಷೇತ್ರದ ವತಿಯಿಂದ ತೆನೆ ತಂದು,ತೆನೆ ಕಟ್ಟಿ ನೊಂಪು ಪೂಜೆ ಆಚರಿಸಿ 14 ಬೈಲುವಾರಿನ ಎಲ್ಲಾ ಮನೆಗಳಿಗೆ ತೆನೆ ಕಟ್ಟು ನೀಡುವ ಮೂಲಕ ವಿಶಿಷ್ಟವಾಗಿ ನೋoಪು ಪೂಜೆಯನ್ನು ಆಚರಿಸಲಾಯಿತು ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ ನಡೆದು ಪ್ರಸಾದ ವಿತರಿಸಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು ರಾತ್ರಿ ಗಂಟೆ 7:30ಕ್ಕೆ ಶ್ರೀ ದೇವರಿಗೆ ದೀಪಾಲಂಕಾರ ರಂಗ ಪೂಜೆ ನಡೆದು ನಂತರ ಶ್ರೀ ಅನಂತೇಶ್ವರ ಫ್ರೆಂಡ್ಸ್ ಇವರು ಉದಾರವಾಗಿ ನೀಡಿದ ಕುರ್ಚಿ ಹಾಗೂ ಟೇಬಲಗಳನ್ನು ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಹಸ್ತಾಂತರಿಸಲಾಯಿತು.

ಹಾಗೂ ಹೊಸದಾಗಿ ನಿರ್ಮಾಣಗೊಂಡ ಅಕ್ಷೋಭ್ಯ ಅನ್ನಛತ್ರಕ್ಕೆ ಉದಾರವಾಗಿ ಟೈಲ್ಸ್ ಕೊಡುಗೆ ನೀಡಿದ ನಮ್ಮ ಕ್ಷೇತ್ರದ ಮಹಾಪೋಷಕರು ಹಾಗೂ ಮಾರ್ಗದರ್ಶಕರು ಆದ ಶ್ರೀ ಮೋಹನ್ ಕುಮಾರ್ ಲಕ್ಷ್ಮಿ ಗ್ರೂಪ್ಸ್ ಕನಸಿನ ಮನೆ ಉಜಿರೆ, ಇವರನ್ನು ಗೌರವಿಸಲಾಯಿತು . ಅದರಂತೆ ಸಾಂಸ್ಕೃತಿಕ ಕಾರ್ಯಕ್ರಮ ಊರ ಮಕ್ಕಳಿಗೆ ಹಾಗೂ ಊರವರಿಗೆ ನಡೆದಿದ್ದು ಈ ಸಂದರ್ಭದಲ್ಲಿ ವಿಶೇಷವಾಗಿ ಕಲಾ ನಿಧಿ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ಬಹುಮುಖ ಪ್ರತಿಭೆ ಯಾದ ಸಿಂಚನ ಸಿ ರಾವ್ ಉಜಿರೆ ಇವರನ್ನು ಗೌರವಿಸಲಾಯಿತು. ಅದರಂತೆ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿಯಾದ ಗಿರೀಶ್ ಸಿರಿ ಶೃಂಗ ಮಂಜೊತ್ತು ಇವರು ನಿರೂಪಿಸಿ,ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸಗೌಡ ವಕೀಲರು ವಂದಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅಸ್ರಣ್ಣ ರಾದ ಗಿರೀಶ್ ಬಾರಿತ್ತಾಯ ಪಾರಳ, ಪ್ರಧಾನ ಕಾರ್ಯದರ್ಶಿಯಾದ ದುರ್ಗಾ ಪ್ರಸಾದ ಕೆರ್ಮುಣ್ಣಾಯ ಉಪಾಧ್ಯಕ್ಷರಾದ ಮಮತಾ ದಿನೇಶ್ ಪೂಜಾರಿ ಉಪ್ಪಾರ್ ಕಾರ್ಯದರ್ಶಿಯಾದ ಸತೀಶ್ ಗೌಡ ಎಳ್ಳುಗದ್ದೆ, ಲೆಕ್ಕ ಪರಿಶೋಧಕರಾದ ನಾರಾಯಣಗೌಡ ಎಳ್ಳುಗದ್ದೆ, ಸಮಿತಿಯ ಹಿರಿಯ ಸದಸ್ಯರಾದ ದೇಜಪ್ಪ ಗೌಡ ಅರಣೆಮಾರು, ಲಿಂಗಪ್ಪ ಪೂಜಾರಿ ಬನಂದೂರು, ಸುಂದರ ಎಂ ಕೆ, ಮುತ್ತಪ್ಪ ಗೌಡ ಕಾಡಂಡ, ಶ್ರೀನಿವಾಸಗೌಡ ಗಣಪನಗು ತ್ತು, ಕಚೇರಿ ಮೆನೇಜರ್ ಶಿವಪ್ರಸಾದ್ ಕೆ ಮತ್ತು 14 ಬೈಲುವಾರಿನ ಸಂಚಾಲಕರು ಹಾಗೂ ಸಹ ಸಂಚಾಲಕರು ಮತ್ತು ಸಮಿತಿ ಸದಸ್ಯರು ಹಾಗೂ ಭಜನಾ ಮಂಡಳಿ ಅಧ್ಯಕ್ಷರಾದ ಹರೀಶ್ ಪೋ ಸೊಟ್ಟು ಮತ್ತು ಸದಸ್ಯರು ಹಾಗೂ ಮಹಿಳಾ ಸಮಿತಿ ಗೌರವಾಧ್ಯಕ್ಷರಾದ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿದ್ಯಾ ಎಸ್ ಗೌಡ ಹಾಗೂ ಮಹಿಳಾ ಪದಾಧಿಕಾರಿಗಳು ಮತ್ತು ಅನಂತೇಶ್ವರ ಫ್ರೆಂಡ್ಸ್ ಇದರ ಸದಸ್ಯರುಗಳು ಉಪಸ್ಥಿತರಿದ್ದು ಕ್ಷೇತ್ರದ ಪ್ರಧಾನ ಅರ್ಚಕರಾದ ಸಂಪತ್ ಕುಮಾರ್ ರವರು ಪೂಜೆ ನೆರವೇರಿಸಿ ಕಾರ್ಯಕ್ರಮ ಸಂಪನ್ನಗೊಂಡಿತು.