
ಉಡುಪಿಯ ಪೋಲೀಸ್ ಅಧೀಕ್ಷಕರಾಗಿದ್ದು, ತಮ್ಮ ಕರ್ತವ್ಯದಕ್ಷತೆಯಿಂದ ಉಡುಪಿ ನಾಗರಿಕರ ಹೃದಯದಲ್ಲಿ ಸ್ಥಾಯಿಯಾಗಿರುವ ಅಣ್ಣಾಮಲೈ ಯವರು ಇಂದು (26.9.2026) ಯಕ್ಷಗಾನ ಕಲಾರಂಗದ ಕಟ್ಟಡ ಮತ್ತು ಮನೆ ಹಸ್ತಾಂತರದ ವಿಡಿಯೋ ತುಣುಕು ವೀಕ್ಷಿಸಿ ಅತ್ಯಂತ ಸಂತಸ ವ್ಯಕ್ತ ಪಡಿಸಿರು. ಸಂಸ್ಥೆಯ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಗಾಧತೆ ಮತ್ತು ಸಾಮಾಜಿಕ ಕಳಕಳಿಗೆ ಮೆಚ್ಚುಗೆ ಸೂಚಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಅಣ್ಣಮಲೈಯವರು ಉಡುಪಿ ಬಿಟ್ಟಮೇಲೂ ಸಂಸ್ಥೆಯನ್ನು ನಿರಂತರ ಪ್ರೋತ್ಸಾಹಿಸುತ್ತ ಬಂದುದನ್ನು ಕೃತಜ್ಞತೆಯಿಂದ ಸ್ಮರಿಸಿಕೊಂಡರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಶಾಲು, ಸ್ಮರಣಿಕೆಯೊಂದಿಗೆ ಗೌರವಿಸಿದರು.
