ಆರ್ ಪಿ ಕಲಾ ಸೇವಾ ಟ್ರಸ್ಟ್ ( ರಿ ) ಪಾಂಬಾರು ಇದರ ವತಿಯಿಂದ ನಡೆದ ಗಾನ ಶಾರದೇ ಗಾಯನ ಸ್ಪರ್ಧೆ ಸೀಸನ್ -04 ಗ್ರಾಂಡ್ ಫಿನಾಳೆ ಸಂಭ್ರಮದ ಸಲುವಾಗಿ ದೇವರ ಮಕ್ಕಳ ಜೊತೆ ಮನೋರಂಜನೆ ಹಾಗೂ ಒಂದಷ್ಟು ಮೊತ್ತ ಸಹಕಾರ ನೀಡಿ ಆರ್ ಪಿ ಸಂಸ್ಥೆ ಪ್ರಶಂಸೆಗೆ ಪಾತ್ರವಾಹಿತು.
ಕಳೆದ 8 ವರುಷಗಳಿಂದ ಅಣ್ಣಪ್ಪ ಹಾಗೂ ಜ್ಯೋತಿ ದಂಪತಿಗಳು ಪ್ರಜ್ಞಾ ಆಶ್ರಮವೆಂಬ ಬೌಧಿಕ, ದಿವ್ಯoಗ ದೇವರ ಮಕ್ಕಳ ಆಶ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಈ ಆಶ್ರಮದಲ್ಲಿ 15 ಅಧಿಕ ಮಕ್ಕಳಿಗೆ ದೇವರಾಗಿ, ಗುರುಗಳಾಗಿ,ಸದಾ ಸೇವೆಯಲ್ಲಿ ತೊಡಗಿಸಿಕೊಂಡ ಈ ದಂಪತಿಗಳಿಗೆ ಆರ್ ಪಿ ಸಂಸ್ಥೆ ಕೃತಜ್ಞತೆಗಳನ್ನು ಸಲ್ಲಿಸಿ ಗೌರವ ಪೂರಕವಾಗಿ ಸನ್ಮಾನಿಸಿಲಾಯಿತು ಹಾಗೂ ದೇವರ ಮಕ್ಕಳ ಜೊತೆ ಮನೋರಂಜನೆ ಕಾರ್ಯಕ್ರಮ ನೀಡಲಾಯಿತು.
ಸಂಸ್ಥೆ ಸಂಚಾಲಕರಾದ ರವಿ ಪಾಂಬಾರ್, ಶ್ರೀಧರ್ ಎಕ್ಕಡ್ಕ ಅಧ್ಯಕ್ಷರು, ರೋಹಿತ್ ಕುರಿಕ್ಕಾರ್ ಉಪಾಧ್ಯಕ್ಷರು, ಹಾಗೂ ಪದಾಧಿಕಾರಿಗಳಾದ ರಶ್ಮಿಕಿರಿಬಾಗ, ಮಮತಾ ಮಡಿಕೇರಿ, ಹರೀಶ್ ಪಂಜಿಕಲ್ಲು, ಕಾವೇರಿ ಸುಳ್ಯ, ಉಪಸ್ಥಿತರಿದ್ದರು.