ಅಮೃತ ಭಾರತಿ ಅಭಿನಂದನ ಕಾರ್ಯಕ್ರಮ

0
20


ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) ವತಿಯಿಂದ ಯುವ ವಿಜ್ಞಾನಿಗಳು ಮತ್ತು ಆವಿಷ್ಕಾರಿಗಳನ್ನು ಹುಟ್ಟುಹಾಕುವ ದೃಷ್ಟಿಯಿಂದ ಆಯೋಜಿಸಿದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಸುರೇಶ್ ಮರಕಾಲ ಇವರ ಮಾರ್ಗದರ್ಶನದಲ್ಲಿ ಕಾರ್ಕಳ ತಾಲೂಕು ಕುಕ್ಕುಜೆ ಸರಕಾರಿ ಪ್ರೌಢಶಾಲೆ ಯನ್ನು ಪ್ರತಿನಿಧಿಸಿ ಭಾಗವಹಿಸಿ ,, ಆಯ್ಕೆಗೊಂಡು ಜಪಾನ್ ದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುಗಿದ ಅಮೂಲ್ಯ ಹೆಗ್ಡೆ ಇವಳನ್ನು ಅಮೃತ ಭಾರತಿ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಬೈರಂಪಳ್ಳಿಯ ಅರುಣ್ ಹೆಗ್ಡೆ ಹಾಗೂ ಅನಿತಾ ಹೆಗ್ಡೆ ಅವರ ಸುಪುತ್ರಿಯಾಗಿರುವ ಈಕೆ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಹೆಬ್ರಿ ಇಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾಳೆ.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜೇಶ್ ನಾಯಕ್, ವಿಶ್ವಸ್ಥರಾದ ವಿಷ್ಣುಮೂರ್ತಿ ನಾಯಕ್, ಪ್ರಾಂಶುಪಾಲರಾದ ಪ್ರಕಾಶ್ ಜೋಗಿ ,ಸಾರ್ವಜನಿಕ ಸಂಪರ್ಕ ಅಧಿಕಾರಿ, ವಿಜಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಆಂಗ್ಲ ಭಾಷೆ ಉಪನ್ಯಾಸಕಿ ಚಂದ್ರಕಲಾ ನಿರೂಪಿಸಿದರು ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು

LEAVE A REPLY

Please enter your comment!
Please enter your name here