ಮಹಿಳಾ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮ

0
81

ಬೆಳ್ತಂಗಡಿ ತಾಲೂಕಿನ ವೇಣೂರ್ ವಲಯದ ಪಡ್ಡತದಡ್ಕ ದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮ ವನ್ನು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮೂಲಕ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ ನಡೆಸಲಾಯಿತು.

ವೇಣೂರ್ ಮಹಿಳಾ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಕಾನೂನು ಪಾಲನೆ ರಕ್ಷಣೆ ಹಾಗೂ ನಿಯಮ ಗಳ ಬಗ್ಗೆ ತಿಳಿಸಿದರು.

ಕಾನೂನನ್ನು ಗೌರವಿಸುವ ಬಗ್ಗೆ ಹೇಳಿದರು.ಸಂಪನ್ಮೂಲ ವೆಕ್ತಿ ಯಾದ ವಕೀಲರಾದ ಅಶ್ವಿನಿ ಡಿ ಸೋಜ ರವರು ಮಾತನಾಡಿ ಮಹಿಳೆಯರ ಹಕ್ಕು. ಮಾನವೀಯತೆ ಗುಣ ಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳುವ ಬಗ್ಗೆ ತಿಳಿಸಿದರು. ತಾಲೂಕಿನ ಯೋಜನಾಧಿಕಾರಿ ಅಶೋಕ್ ಬಿ ಯವರು ಪ್ರಾಸ್ತವಿಕ ಮಾತನಾಡಿದರು.

ತಾಲೂಕ್ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಶೋಭಾ ಹಾಗೂ ಜಯಂತಿ ಯವರು ಒಕ್ಕೂಟ ದ ಅಧ್ಯಕ್ಷರು ವಿಲಿಯಮ್ ರೆಗೋ ಮತ್ತು ಪ್ರವೀಣ್ ನಾಯ್ಕ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here