ಕೊರಿಂಜ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

0
33

ಬೆಳ್ತಂಗಡಿ ತಾಲೂಕಿನ ಕೊರಿಂಜ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಗುರುವಾಯನಕೆರೆ ಇದರ ನೇತ್ರತ್ವದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯ ಕೊರಿಂಜ ದೇವಸ್ಥಾನ ಮತ್ತು ಭಜನಾ ಮಂಡಳಿಯ ಜಂಟಿ ಯಲ್ಲಿ ಕೊರಿಂಜ ಸಮುದಾಯ ಭವನದಲ್ಲಿ ನಡೆಯಿತು. ಕಾರ್ಯಕ್ರಮ ದ ಉದ್ಘಾಟನೆ ಯನ್ನು ಕೊರಿಂಜ ದೇವಸ್ಥಾನ ದ ಆಡಳಿತ ಮುಕ್ತೆಸ ರರಾದ ಯೋಗೀಶ್ ರವರು ಮಾಡಿ ಕಾರ್ಯಕ್ರಮ ಕ್ಕೆ ಶುಭ ಹಾರೈಸಿರುತ್ತಾರೆ.

ಯೋಜನೆ ಯ ತಾಲೂಕ್ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುಗುಣ ಶೆಟ್ಟಿ ಯವರು ಪ್ರಾಸ್ಥಾವಿಕ ಮಾತನಾಡಿದರು. ಸಂಪನ್ಮೂಲ ವೆಕ್ತಿ ಗಳಾದ ವೈದ್ಯರಾದ ಡಾ. ಸಹನಾ k.ಚೀಫ್ ಆಫೀಸರ್ ಇವರು ಅರೋಗ್ಯ ದ ಬಗ್ಗೆ ಮಾಹಿತಿ ನೀಡಿ ಆರೋಗ್ಯ ವೇ ಭಾಗ್ಯ. ನಾವು ಆರೋಗ್ಯ ವಾಗಿದ್ದರೆ ನೆಮ್ಮದಿಯ ಜೀವನ ನಡೆಸಬಹುದು. ಇಂತಹ ಗ್ರಾಮೀಣ ಮಟ್ಟದಲ್ಲಿ ನಡೆಸುವ ಉಚಿತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆಯಬೇಕು ಎಂದು ಶುಭ ಹಾರೈಸಿದರು. ಸೇವಾಪ್ರತಿನಿಧಿ ಸೀತಾ ರಾಮ ಸ್ವಾಗತಿಸಿ. ಜ್ಞಾನ ವಿಕಾಸ ಸಂಯೋಜಕಿ ಜಾಲಜಾಕ್ಷಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here