ಬ್ರಾಹ್ಮಣ ಮಹಾ ಸಭಾ ಸುರತ್ಕಲ್ ವಲಯ ಇದರ ವಾರ್ಷಿಕೋತ್ಸವ ಮಹಾಸಭೆ ಹಾಗೂ ಸನ್ಮಾನ-ಗೌರವಾರ್ಪಣೆ ಕಾರ್ಯಕ್ರಮ

0
3

ಸುರತ್ಕಲ್‌ : ಬ್ರಾಹ್ಮಣ ಮಹಾ ಸಭಾ ಸುರತ್ಕಲ್ ವಲಯ ಇದರ ವಾರ್ಷಿಕೋತ್ಸವ ಮಹಾಸಭೆ ಹಾಗೂ ಸನ್ಮಾನ-ಗೌರವಾರ್ಪಣೆ ಕಾರ್ಯಕ್ರಮವು ಕರ್ಮಯೋಗಿ ಧರ್ಮದರ್ಶಿ ಡಾ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಜರಗಿದ್ದು ಬ್ರಾಹ್ಮಣತ್ವ ಕೇವಲ ಹುಟ್ಟಿನಿಂದಲ್ಲ ಅವನ ಆಚರಣೆಗಳಿಂದ ಎಂದರು.

ಮುಖ್ಯ ಅತಿಥಿಗಳಾಗಿ ಬ್ರಾಹ್ಮಣ ಸಮಾಜ ಹಿತ ರಕ್ಷಣಾ ವೇದಿಕೆ ಸುರತ್ಕಲ್ ಇದರ ಅಧ್ಯಕ್ಷರು ಹಾಗೂ ಉದ್ಯಮಿ ಮೆ. ಸ್ನೇಹ ಕೆಟರರ್ಸ್ ಇದರ ಮಾಲಕರಾದ ರಮೇಶ್ ಟಿ ಯನ್ ಭಾಗವಹಿಸಿದ್ದು ಬ್ರಾಹ್ಮಣರನ್ನು ಮತ್ತು ಬ್ರಾಹ್ಮಣ್ಯವನ್ನು ನಿಂದಿಸುವವರ ವಿರುದ್ಧ ಬ್ರಾಹ್ಮಣರಾದ ನಾವು ದನಿ ಎತ್ತಬೇಕು ಎಂದರು.

ರಾಘವೇಂದ್ರ ಮಠ ಹೊಸಬೆಟ್ಟು ಇದರ ಮೆನೇಜರ್ ಶ್ರೀನಿಧಿ ಯಂ ಭಟ್ ಇವರು ಭಾಗವಹಿಸಿದ್ದು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ಉಳಿಯಬೇಕಾದರೆ ಮೊದಲು ಹಿರಿಯರು ಅದನ್ನು ಅನುಸರಿಸಬೇಕು. ಅದು ಉಡುಗೆ ತೊಡುಗೆ ಆಹಾರ ಸೇವನೆ ಜಪ ಯಾವುದೇ ಇರಲಿ ನಮ್ಮನ್ನು ನೋಡಿ ನಮ್ಮ ಮಕ್ಕಳು ಕಲಿಯುತ್ತಾರೆ ಎಂದರು.

ಮುಖ್ಯ ಅತಿಥಿಗಳಲ್ಲೋರ್ವರಾದ ಶ್ರೀಕ್ಷೇತ್ರ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಶಕುಂತಲಾ ರಮಾನಂದ ಭಟ್ ಸಂಘದ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ಖ್ಯಾತ ನೇತ್ರ ತಜ್ಞರಾದ ಡಾ. ಬಿ ಗುರುರಾಜ್, ಬ್ರಾಹ್ಮಣ ಸಂಘ ಕಾಟಿಪಳ್ಳ ಕೃಷ್ಣಾಪುರ ಇದರ ಅಧ್ಯಕ್ಷರಾದ ರವೀಂದ್ರ ರಾವ್ ಉಪಸ್ಥಿತರಿದ್ದರು.
SSLC PUC ಮತ್ತು ಪದವಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿದವರನ್ನು, ಪಾಕ ತಜ್ಞರನ್ನು, 85 ವರ್ಷಕ್ಕಿಂತ ಮೇಲ್ಪಟ್ಟ ವಿಪ್ರ ಬಾಂಧವರನ್ನು ಮತ್ತು ಸಾಧಕರುಗಳಿಗೆ ಗೌರವ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.

ರಮಾ ವೆಂಕಟ್ರಾವ್ ಮತ್ತು ಮಹಾಲಕ್ಷ್ಮಿ ದಿವಾಕರ್ ಪ್ರಾರ್ಥಿಸಿದ್ದು, ಅಧ್ಯಕ್ಷರಾದ ವಿಶ್ವೇಶ್ವರ ಬದವಿದೆ ಸ್ವಾಗತಿಸಿದ್ದು, ಕಾರ್ಯದರ್ಶಿ ಕೆ ಕಲಾವತಿ ವರದಿ ವಾಚನ ಗೈದರು. ಕೋಶಾಧಿಕಾರಿ ಸದಾಶಿವ ಕಾರಂತ ಲೆಕ್ಕ ಪತ್ರ ಮತ್ತು ಮುಂಗಡ ಪತ್ರ ಮಂಡಿಸಿದ್ದು ನೂತನ ಪದಾಧಿಕಾರಿಗಳ ಪಟ್ಟಿಯನ್ನು ಮುರಾರಿ ರಾವ್ ವಾಚಿಸಿದರು. ವಿದ್ಯಾದಾಯಿನೀ ಹಳೆವಿದ್ಯಾರ್ಥಿಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ವಂದನಾರ್ಪಣೆ ಗೈದಿದ್ದು ಯಮುನಾ ಪಿ ರಾವ್ ನಿರೂಪಿಸಿದರು.