ಬಳಂಜದಲ್ಲಿ ‘ಮನಸ್ವಿನಿ’ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

0
28

“ಮನಸ್ವಿನಿ “ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ )ಬಳಂಜ ದ ವಾರ್ಷಿಕ ಮಹಾಸಭೆ ಯನ್ನು ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ಲಿಲ್ಲಿ ವೇಗಸ್ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.LCRP ಬೇಬಿ ರವರು ಕಾರ್ಯಕ್ರಮ ನಿರೂಪಿಸಿದರು.ಸ್ವಚ್ಛ ವಾಹಿನಿಯ ಚಾಲಕಿ ಭಾರತಿ ರವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.

B.C.ಸಖಿ ಅಶ್ವಿನಿ ರವರು ಸರ್ವರನ್ನೂ ಸಭೆಗೆ ಸ್ವಾಗತಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ ಮೇಡಂ ರವರು ಹಾಗೂ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಲಿಲ್ಲಿ ವೇಗಸ್ ರವರು ದೀಪ ಹಚ್ಚಿ ಕಾರ್ಯಕ್ರಮ ಉದ್ಘಾಟಿಸಿ ದರು.ಒಕ್ಕೂಟದ ವಾರ್ಷಿಕ ವರದಿ ಯನ್ನು MBK ವಿಮಲಾ ರವರು ಸಭೆಗೆ ಮಂಡಿಸಿದರು.ವರದಿಯು ಸಭೆ ಯಲ್ಲಿ ಅನುಮೋದನೆ ಗೊಂಡಿತು.

ಅಲ್ಲದೆ ಒಕ್ಕೂಟದ ಕಾರ್ಯದರ್ಶಿ ಅಶ್ವಿನಿ ರವರು ಜಮಾ -ಖರ್ಚಿನ ವರದಿಯನ್ನು ಮಂಡಿಸಿದರು.ಹಾಗೂ ವಲಯ ಮೇಲ್ವಿಚಾರಕ ರಾದ ಸ್ವಸ್ತಿಕ್ ಜೈನ್ ರವರು ಸಂಜೀವಿನಿ ಧ್ಯೇಯೋದ್ದೇಶ ದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ಯನ್ನು ನೀಡಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಲಾ ಮೇಡಂ ರವರು ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ಯನ್ನು ನೀಡಿದರು.

ಪದಾಧಿಕಾರಿಗಳ ಪದಗ್ರಹಣ ವನ್ನು ವಲಯ ಮೇಲ್ವಿಚಾರಕ ರಾದ ಸ್ವಸ್ತಿಕ್ ಜೈನ್ ಸರ್ ರವರು ನಡೆಸಿದರು. ಹಾಗೂ ಅಧಿಕಾರ ಹಸ್ತಾಂತರವನ್ನು ನಡೆಸಲಾಯಿತು.ಮತ್ತು ಆಯೋಜಿಸಲಾಗಿದ್ದ ಪುಷ್ಪಗುಚ್ಛ ಸ್ಪರ್ಧೆ,ಲಕ್ಕಿ ಗೇಮ್, ಈ ದಿನದ ಲಕ್ಕಿ ಸ್ಟಾರ್, ರಸಪ್ರಶ್ನೆ ಮುಂತಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವನ್ನು ವಿತರಿಸಲಾಯಿತು.

ನಿರ್ಗಮಿತ ಸದಸ್ಯರು ಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಅಧ್ಯಕ್ಷರು ಮಾತನಾಡಿ ಹಳೆ ಸಮಿತಿಯ ಒಂದೊಳ್ಳೆ ಅಡಿಪಾಯದಿಂದ ಮತ್ತು ಸಂಘದ ಸದಸ್ಯರು ಗಳ ಸಕಾರಾತ್ಮಕ ಸ್ಪಂದನೆ ಯಿಂದ, ಸಂಜೀವಿನಿ ಸಿಬ್ಬಂದಿ ಗಳ ಕಾರ್ಯ ವೈಖರಿ ಯಿಂದ ಒಕ್ಕೂಟದ ಈ ಮಟ್ಟದ ಪ್ರಗತಿ ಗೆ ಸಾಧ್ಯ ವಾಯಿತು ಎಂದು ಶುಭಹಾರೈಸಿದರು.

ವಲಯ ಮೇಲ್ವಿಚಾರಕ ರು ಸದಸ್ಯರು ಗಳಿಂದ ಸಂಜೀವಿನಿ ಧ್ಯೇಯ ಗೀತೆ ಯನ್ನು ಸುಶ್ರಾವ್ಯವಾಗಿ ಹಾಡಿಸಿ ಕಾರ್ಯಕ್ರಮ ದ ಮೆರುಗನ್ನು ಹೆಚ್ಚಿಸಿದರು. ಎಲ್ಲಾ ಸಂಜೀವಿನಿ ಸಿಬ್ಬಂದಿ ಗಳು ಸರ್ವ ರೀತಿ ಯಲ್ಲೂ ಸಹಕರಿಸಿದರು.LCRP ಚಂದ್ರಾವತಿ ರವರ ಧನ್ಯವಾದ ಗಳೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.