ಬಿಚ್ಕತ್ತಿ ಕುಟುಂಬದಿಂದ ಪಿತೃಪಕ್ಷ ಯಶಸ್ವಿ

0
8

ದಾವಣಗೆರೆ : ಉಡುಪಿ ಜಿಲ್ಲೆಯ ಸಾಲಿಗ್ರಾಮದ ಮೂಲಮನೆ ಬಿಚ್ಕತ್ತಿ ಕುಟುಂಬದ ಹಂದಟ್ಟು ಮಹಾಲಯ ಸಭಾಂಗಣದಲ್ಲಿ ಇತ್ತಿಚಿಗೆ ಪಿತೃಪಕ್ಷದ ಪ್ರಯುಕ್ತ ಸ್ವರ್ಗಸ್ಥರಾದ ಬಿಚ್ಕತ್ತಿ ಕುಟುಂಬದ ಹಿರಿಯರಿಗೆ ಮೂರು ತಲೆಮಾರಿಗೆ ಪಿತೃ ಪ್ರಧಾನ ಯಶಸ್ವಿಯಾಗಿತು ಎಂದು ಬಿಚ್ಕತ್ತಿ ಕುಟುಂಬದ ಮುಖ್ಯಸ್ಥರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.

ಬಿಚ್ಕತ್ತಿ ಕುಟುಂಬದ ಹಿರಿಯ ಮಾತಾ ಪಿತೃರಿಗೆ ಶ್ರಾದ್ಧ ಪಿಂಡ ತೃಪ್ತಿ ಪಡಿಸಿ ಅಗಲಿದ ಚೈತನ್ಯಗಳಿಗೆ ಶ್ರಾದ್ಧ ಕ್ರಿಯೆ ಪುರೋಹಿತರಾದ ಕೃಷ್ಣ ಭಟ್ಟ ಮತ್ತು ತಂಡ ಶಾಸ್ತೊçÃತ್ಸವವಾಗಿ ನಡೆಸಿಕೊಟ್ಟರು. ಬಿಚ್ಕತ್ತಿ ಕುಟುಂಬದ ಹಿರಿಯರಾದ ಸರ್ವೋತ್ತಮ ಶ್ಯಾನುಭಾಗ್, ಮಧುಸೂಧನ ಶ್ಯಾನುಭಾಗ್, ರಾಮದಾಸ್ ಶ್ಯಾನುಭಾಗ್, ಗಣಪತಿ ಶ್ಯಾನುಭಾಗ್ ಮುಂತಾದವರು ಉಪಸ್ಥಿತರಿದ್ದರು.

ಪಿಂಡ ಪ್ರದಾನ ಆದ ಮೇಲೆ ಕುಟುಂಬ ಪುರುಷರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಭೋಜನ ವ್ಯವಸ್ಥೆ ಬಿಚ್ಕತ್ತಿ ಕುಟುಂಬದವರು ಮಾಡಿದ್ದಾರೆ.