ನಾಡ್ಪಾಲು ಗ್ರಾಮದ ತಿಂಗಳೆ ಪ್ರತಿಷ್ಠಾನದಿಂದ ವರ್ಷಂಪ್ರತಿ ಸಾಹಿತ್ಯೋತ್ಸವ

0
21

ಉಡುಪಿ: ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆ ಪ್ರತಿಷ್ಠಾನದಿಂದ ವರ್ಷಂಪ್ರತಿ ಜರಗುವ ಸಾಹಿತ್ಯೋತ್ಸವ ಮಾ.8 ರಂದು ಸಂಜೆ 6 ರಿಂದ ತಿಂಗಳೆಯಲ್ಲಿ ನಡೆಯಲಿದೆ ಎಂದು ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದು ಸಂಜೆ 6 ರಿಂದ ನಡೆಯುವ 64 ನೇ ಸಾಹಿತ್ಯೋತ್ಸವದ ಅಧ್ಯಕ್ಷತೆಯನ್ನು ಮಾಹೆ ಸಹಕುಲಾಧಿಪತಿ ಡಾ| ಹೆಚ್.ಎಸ್.ಬಲ್ಲಾಳ್ ವಹಿಸಲಿದ್ದಾರೆ. ಚಿಂತಕಿ ಡಾ। ವೀಣಾ ಬನ್ನಂಜೆ “ರಾಮಾಯಣ ಜೀವನ ಮೌಲ್ಯ” ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್, ಮುಂಬೈಯ ಪ್ರವೀಣ್ ಬಾಯ್ ಟಾಂಕ, ಬಾಲಕೃಷ್ಣ ಭಂಡಾರಿ ಕುಂಬ್ಳೆ ಹಾಗು ಡಾ.ಕೃಷ್ಣಪ್ರಸಾದ್ ಭಾಗವಹಿಸಲಿದ್ದು, ಯಕ್ಷಗಾನ ಕಲಾರಂಗದ ಮುರುಳಿ ಕಡೆಕಾರ್ ಅವರಿಗೆ “ತಿಂಗಳೆ ಪ್ರಶಸ್ತಿ” ನೀಡಿ ಅಭಿನಂದನೆ ಮಾಡಲಾಗುವುದು. ಡಾ| ಪ್ರಶಾಂತ್ ಶೆಟ್ಟಿ, ಅಮಿತಾಂಜಲಿ ಕಿರಣ್ ಕಾರ್ಯಕ್ರಮ ನಿರೂಪಿಸಲಿದ್ದಾರೆ.

ಸಭಾಕಾರ್ಯಕ್ರಮದ ನಂತರ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರು ಮಂಗಳೂರು ಇವರಿಂದ ಮಾರಣಕಟ್ಟೆ ಕ್ಷೇತ್ರದ ಐತಿಹ್ಯವನ್ನು ಸಾರುವ ಶ್ವೇತಾ ಅರೆಹೊಳೆ ನಿರ್ದೇಶನದ “ಬಿಡುವನೇ ಬ್ರಹ್ಮಲಿಂಗ” ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ.

ಮಾ. 6, 7 ಹಾಗು 8 ರಂದು ತಿಂಗಳೆಯ ಧರ್ಮದೇವತೆಗಳ ನೇಮೋತ್ಸವ ನೆರವೇರಲಿದೆ ಎಂದು ಜರುಗಲಿದೆ. ಮಾ.8 ರಂದು ರಾತ್ರಿ 9.30 ಕ್ಕೆ ಕಾರಣಿಕದ ಶಿವರಾಯ ದೈವದ ನೇಮೋತ್ಸವ ಜರುಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here