ಕಂಬಳ ಪ್ರಿಯರಿಗೆ ಮತ್ತೆ ಆಘಾತ : ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಜನಪ್ರಿಯ ಕೋಣ ಚೀಂಕ್ರ ಸಾವು

0
520

ಬೆಳುವಾಯಿ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದ ಮತ್ತು ಹಲವು ಕಂಬಳ ಕೂಟಗಳಲ್ಲಿ ಪದಕಗಳನ್ನು ಗೆದ್ದಿದ್ದ ಬೆಳುವಾಯಿ ಪೆರೋಡಿ ಪುತ್ತಿಗೆಗುತ್ತು ಕೌಶಿಕ್ ದಿನಕರ್ ಶೆಟ್ಟಿ ಅವರ ಐದು ವರ್ಷ ಪ್ರಾಯದ ಕೋಣ ಚೀಂಕ್ರ ಜ್ವರದಿಂದ ಮಂಗಳವಾರ (ಜೂ.10) ನಿಧನವಾಗಿದೆ.
ಈ ಕೋಣವು ತನ್ನ ಮಾಲಕ ಕೌಶಿಕ್ ದಿನಕರ್ ಶೆಟ್ಟಿ ಅವರೊಂದಿಗೆ ‘ಶೇಕ್ ಹ್ಯಾಂಡ್’ ನೀಡುವ ವಿಡಿಯೋ ವೈರಲ್ ಆಗಿ ಗಮನ ಸೆಳೆದಿತ್ತು. ಇದರ ವಿಶಿಷ್ಟ ಸಾಮರ್ಥ್ಯ ಮತ್ತು ಸ್ನೇಹಪರ ಸ್ವಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಕಂಬಳ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಚೀಂಕ್ರ ಕೋಣ ತನ್ನ ಛಾಪು ಮೂಡಿಸಿತ್ತು. ಕಾರ್ಕಳದ ಮುಖೇಶ ಕೋಣದ ಜತೆಗೆ ಜೂನಿಯರ್ ಹಗ್ಗ ವಿಭಾಗದಲ್ಲಿ ತನ್ನ ಮೊದಲ ಪದಕ ಗೆದ್ದು, ಹಲವು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಇತ್ತೀಚೆಗೆ ಮುಕ್ತಾಯಗೊಂಡ ಕಂಬಳ ಸೀಸನ್‌ನಲ್ಲೂ ಹಲವು ಪ್ರಶಸ್ತಿಗಳನ್ನು ಗೆದ್ದುಕೊಂಡಿತ್ತು.

ಕಳೆದ ಹಲವಾರು ದಿನಗಳಿಂದ ಚೀಂಕ್ರ ಕೋಣವು ಜ್ವರದಿಂದ ಬಳಲುತ್ತಿತ್ತು. ಇದರ ಸ್ನೇಹಪರ ಸ್ವಭಾವವು ಸಾಕಷ್ಟು ಅಭಿಮಾನಿಗಳನ್ನು ಸೃಷ್ಟಿ ಮಾಡಿತ್ತು. ಆದ್ದರಿಂದ ಕಂಬಳ ಅಭಿಮಾನಿಗಳು ಮತ್ತು ಕ್ಷೇತ್ರದ ವಲಯದಲ್ಲಿ ದುಃಖವನ್ನು ತಂದೊಡ್ಡಿದೆ. ಇದಲ್ಲದೆ, ಚೀಂಕ್ರ ಕೋಣವು ತನ್ನ ಮಾಲೀಕರಾದ ಕೌಶಿಕ್ ದಿನಕರ್ ಶೆಟ್ಟಿ ಅವರಿಗೆ ಶೇಕ್ ಹ್ಯಾಂಡ್ ನೀಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು ಅಲ್ಲದೆ ವೈರಲ್ ಆಗಿತ್ತು.

ಚೀಂಕ್ರ ಕೋಣದ ಕೌಶಲ್ಯ ಮತ್ತು ಚಾಕಚಕ್ಯತೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲದೆ, ಹಲವಾರು ಕಂಬಳ ಸ್ಪರ್ಧೆಗಳಲ್ಲಿ ಭಾಗವಹಿಸಿದ ಚೀಂಕ್ರ ಕೋಣವು ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿತ್ತು.

ಸಾಕಷ್ಟು ಚುರುಕಾಗಿದ್ದ ಚೀಂಕ್ರ ಕೋಣವು ಕೇವಲ ತನ್ನ 5ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಸಾವನ್ನಪ್ಪಿರುವುದು ಕೇವಲ ದಿನಕರ ಶೆಟ್ಟಿ ಕುಟುಂಬಕ್ಕೆ ಮಾತ್ರವಲ್ಲದೆ ಕಂಬಳ ಪ್ರಿಯ ಸಮುದಾಯದಲ್ಲಿ ಆಘಾತ ಮತ್ತು ದುಃಖ ತಂದಿದೆ.

LEAVE A REPLY

Please enter your comment!
Please enter your name here