ಕಾರ್ಕಳದಲ್ಲಿ ‘ಅನುವಾ ಸ್ಕಿನ್, ಹೇರ್ & ಎಸ್ತೆಟಿಕ್ ಕ್ಲಿನಿಕ್’ ಶುಭಾರಂಭ‌

0
7

ಕಾರ್ಕಳ : ನಗರದಲ್ಲಿ ಚರ್ಮ, ಕೇಶ ಹಾಗೂ ಸೌಂದರ್ಯ ಆರೈಕೆ ಕ್ಷೇತ್ರಕ್ಕೆ ನೂತನ ಹೆಜ್ಜೆಯಾಗಿ ‘ಅನುವಾ ಸ್ಕಿನ್, ಹೇರ್ & ಎಸ್ತೆಟಿಕ್ ಕ್ಲಿನಿಕ್’ ಸೇವೆಗೆ ಅಧಿಕೃತ ಚಾಲನೆ ದೊರೆತಿದೆ. ಆಧುನಿಕ ತಂತ್ರಜ್ಞಾನ ಹಾಗೂ ತಜ್ಞ ವೈದ್ಯಕೀಯ ಆರೈಕೆಯನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಕ್ಲಿನಿಕ್ ಕಾರ್ಯಾರಂಭಿಸಿದೆ.

ಸ್ಥಳೀಯ ಜೋಡುರಸ್ತೆ ಜಂಕ್ಷನ್‌ನಲ್ಲಿರುವ ಫಾರ್ಚೂನ್ ಲೋಟಸ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಕ್ಲಿನಿಕ್ ಆರಂಭಗೊಂಡಿದ್ದು, ಚರ್ಮರೋಗ ತಜ್ಞೆ ಡಾ. ಪಿ. ಅನುಷಾ ಡಿಸೋಜಾ ಅವರ ಉಸ್ತುವಾರಿಯಲ್ಲಿ ಸೇವೆ ನೀಡಲಿದೆ.

ಚರ್ಮದ ಆರೋಗ್ಯ ಹಾಗೂ ಸೌಂದರ್ಯ ಆರೈಕೆಗೆ ಸಂಬಂಧಿಸಿದಂತೆ ಲೇಸರ್ ಹೇರ್ ರಿಮೂವಲ್, ಮೆಡಿಫೇಶಿಯಲ್, ಕೇಶ ಸಂರಕ್ಷಣೆ ಹಾಗೂ ಕೂದಲು ಉದುರುವಿಕೆ ನಿಯಂತ್ರಣ ಸೇರಿದಂತೆ ವಿವಿಧ ಆಧುನಿಕ ಚಿಕಿತ್ಸಾ ಸೇವೆಗಳು ಇಲ್ಲಿ ಲಭ್ಯವಿರಲಿವೆ. ವೈಯಕ್ತಿಕ ಅಗತ್ಯಗಳನ್ನು ಪರಿಗಣಿಸಿ ತಜ್ಞ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ನೀಡುವುದು ಕ್ಲಿನಿಕ್‌ನ ಪ್ರಮುಖ ಉದ್ದೇಶವಾಗಿದೆ.

ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಹಾಗೂ ಸುಧಾರಿತ ಚಿಕಿತ್ಸಾ ವಿಧಾನಗಳೊಂದಿಗೆ ಸಜ್ಜುಗೊಂಡಿರುವ ಈ ಕ್ಲಿನಿಕ್, ಕಾರ್ಕಳ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಚರ್ಮ ಹಾಗೂ ಸೌಂದರ್ಯ ಆರೈಕೆ ಸೇವೆ ಪಡೆಯಲು ಅನುಕೂಲ ಕಲ್ಪಿಸಲಿದೆ.

ಬೆಂಗಳೂರು, ಮಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳುವ ಅಗತ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ನೂತನ ಕ್ಲಿನಿಕ್ ಮಹತ್ವದ ಹೆಜ್ಜೆಯಾಗಿದೆ. ವೈದ್ಯಕೀಯ ಕೌಶಲ್ಯ ಮತ್ತು ಆಧುನಿಕ ತಂತ್ರಜ್ಞಾನದ ಸಮ್ಮಿಲನದ ಮೂಲಕ ಉತ್ತಮ ಸೇವೆ ನೀಡುವ ವಿಶ್ವಾಸವನ್ನು ಸಂಸ್ಥೆ ವ್ಯಕ್ತಪಡಿಸಿದೆ.