ವೀರಕಂಭ ಗ್ರಾಮದ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ

0
22

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ವೀರಕಂಭ ಗ್ರಾಮದ ತೆಕ್ಕಿಪಾಪು ನಳಿನಿ ಮೋನಪ್ಪ ಪೂಜಾರಿರವರ ಮನೆ ವಠಾರದಲ್ಲಿ ಬುಧವಾರ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ಗೋಳಿಮಾರ್ ವಹಿಸಿದ್ದರು.

ಕಾರ್ಯಕ್ರಮವನ್ನು ಕೃಷಿಕರಾದ ಜಯಪ್ರಕಾಶ್ ತೆಕ್ಕಿಪಾಪು ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಗಾಗಿ ಬಂಟ್ವಾಳ ತಾಲೂಕು ತೋಟಗಾರಿಕಾ ನಿರ್ದೇಶಕ ದಿನೇಶ್, ತಾಲೂಕು, ಕೃಷಿ ಅಧಿಕಾರಿ ನಂದನ್ ಶೆಣೈ, ತಾಂತ್ರಿಕ ವ್ಯವಸ್ಥಾಪಕ ಆತ್ಮ ಯೋಜನೆ ಬಿ ಸಿರೋಡ್ ನ ಹನುಮಂತ ಕಾಳಗಿ, ರೈತರಿಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರೆಹಮಾನ್,ಪ್ರಗತಿಪರ ಕೃಷಿಕ ಮಜಿ ತಿರುಮಲೇಶ್ವರ ಕುಮಾರ್,, ನಿವೃತ್ತ ಸೈನಿಕ ಚಂದ್ರಶೇಖರ್, ಉಪಸ್ಥಿತರಿದ್ದರು.

ಕುಸುಮ ಶೆಟ್ಟಿ ಹಾಗೂ ಪ್ರೇಮಾ ಆಚಾರ್ಯ ಪ್ರಾರ್ಥಿಸಿ, ವೀರಕಂಬ ಗ್ರಾಮಪಶು ಸಖಿ ಪ್ರಚೀನ ಸ್ವಾಗತಿಸಿ,, ಸ್ನೇಹ ಸಂಜೀವಿನಿ ಒಕ್ಕೂಟದ ಮುಖ್ಯ ಬರಹಗಾರ ಮಲ್ಲಿಕಾ ಶೆಟ್ಟಿ, ವಂದಿಸಿದರು. ಕೃಷಿ ಸಾವಯವ ಗೊಬ್ಬರ ಸಿ ಆರ್ ಪಿ ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.

ಕೃಷಿ ಸಖಿಗಳಾದ ನಮಿತಾ, ಗಾಯತ್ರಿ ಅಳಿಕೆ, ಸವಿತ ಡಿಸೋಜ ತಾಂತ್ರಿಕ ವ್ಯವಸ್ಥಾಪಕರು ಆತ್ಮ ಯೋಜನೆ ವಿಟ್ಲದ ವಿರೂಪಾಕ್ಷ  ಸಹಕರಿಸಿದರು.

LEAVE A REPLY

Please enter your comment!
Please enter your name here