ಬೆಂಗಳೂರು : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ವತಿಯಿಂದ ನಾಡು, ನುಡಿ ಹಾಗೂ ವಿವಿಧ ಕ್ಷೇತ್ರಗಳಿಗೆ ಸೇವೆ ಸಲ್ಲಿಸಿರುವ ಸಾಧಕರನ್ನು ಗೌರವಿಸುವ ಸಲುವಾಗಿ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಹ ಸಾಧಕರಿಗೆ ‘ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ‘ಕರ್ನಾಟಕ ಭೂಷಣ ಪ್ರಶಸ್ತಿ’, ‘ಸಹಕಾರ ರತ್ನ ಪ್ರಶಸ್ತಿ’, ‘ಸಮಾಜ ಸೇವಾ ರತ್ನ ಪ್ರಶಸ್ತಿ’, ‘ಶಿಕ್ಷಣ ರತ್ನ ಪ್ರಶಸ್ತಿ’, ‘ಕನ್ನಡ ರತ್ನ ಪ್ರಶಸ್ತಿ’, ‘ಕರ್ನಾಟಕ ರತ್ನ ಶ್ರೀ ಪ್ರಶಸ್ತಿ’ ಹಾಗೂ ‘ಕರ್ನಾಟಕ ವಿಕಾಸ ರತ್ನ’ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.
ಶಿಕ್ಷಣ, ನೃತ್ಯ, ಸಂಗೀತ, ಸಂಸ್ಕೃತಿ, ಕೃಷಿ, ಕೈಗಾರಿಕೆ, ಕಾನೂನು, ಪರಿಸರ, ಸಮಾಜಸೇವೆ, ಸಂಶೋಧನೆ, ಕುಸ್ತಿ, ವೈದ್ಯಕೀಯ ಸೇವೆ, ಉದ್ಯಮ, ಕ್ರೀಡೆ, ರಂಗಭೂಮಿ, ಚಲನಚಿತ್ರ, ಕಿರುತೆರೆ, ಆಡಳಿತ, ಪತ್ರಿಕೋದ್ಯಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಪೊಲೀಸ್ ಸೇವೆ, ಗುಡಿ ಕೈಗಾರಿಕೆ, ನಾಡು–ನುಡಿ, ಜನಪರ ಹೋರಾಟ, ಉದ್ಯೋಗ ಸೃಷ್ಟಿ, ಕೋಮು ಸಾಮರಸ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಾಧಕರು ಹಾಗೂ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ಸ್ತ್ರೀ–ಪುರುಷರು ಹಾಗೂ ಮಕ್ಕಳು ತಮ್ಮ ಜೀವನ ಪರಿಚಯ (ಬಯೋಡೇಟಾ), ಸಾಧನೆಯನ್ನು ಗುರುತಿಸುವ ಪ್ರಮಾಣಪತ್ರಗಳ ಪ್ರತಿಗಳು ಹಾಗೂ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಗಳು 2026ರ ಅಕ್ಟೋಬರ್ 10ರೊಳಗೆ ತಲುಪುವಂತೆ ಕಳುಹಿಸಬೇಕಾಗಿದೆ.
ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ:
ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.),
ನಂ.03, 4ನೇ ಮುಖ್ಯರಸ್ತೆ, ಬೈರಪ್ಪ ರೋಡ್,
ಬಿ.ಡಬ್ಲ್ಯೂ.ಎಸ್.ಎಸ್.ಬಿ ಕಚೇರಿ ಹತ್ತಿರ,
ಅನ್ನಪೂರ್ಣೇಶ್ವರಿ ನಗರ, ಮಲ್ಲತಳ್ಳಿ,
ಐ.ಟಿ.ಐ. ಎಂಪ್ಲಾಯೀಸ್ ಲೇಔಟ್, ಬೆಂಗಳೂರು–560091.
ಸಂಪರ್ಕ: 9916690077, 8123253337.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಅರ್ಹರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ವಿವರಗಳನ್ನು ನಿಗದಿತ ಅವಧಿಯೊಳಗೆ ಸಲ್ಲಿಸುವಂತೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ (ರಿ.) ವತಿಯಿಂದ ಮನವಿ ಮಾಡಲಾಗಿದೆ.
