Saturday, April 19, 2025
HomeUncategorizedಕದ್ರಿ ಮಂಜುನಾಥೇಶ್ವರ ದೇವರ ಆಡಳಿತ ಮಂಡಳಿ ನೇಮಕ ಸದಸ್ಯರಿಗೆ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌...

ಕದ್ರಿ ಮಂಜುನಾಥೇಶ್ವರ ದೇವರ ಆಡಳಿತ ಮಂಡಳಿ ನೇಮಕ ಸದಸ್ಯರಿಗೆ ವಿಧಾನ ಪರಿಷತ್‌ ಶಾಸಕರಾದ ಶ್ರೀ ಐವನ್‌ ಡಿಸೋಜಾರವರಿಂದ  ಮಹಾನಗರ ಪಾಲಿಕೆ ಕಛೇರಿಯಲ್ಲಿ ಸನ್ಮಾನ

ದೇವರ ಸೇವೆ ಮಾಡುವ ಅವಕಾಶ ಪಡೆದಿರುವ ಟ್ರಸ್ಟಿಗಳು  ಸಮಾಜದ ಎಲ್ಲಾ ವರ್ಗಗಳ ಸೇವೆಗಳಿಗೆ ಬದ್ದರಾಗಿದ್ದು, ಸಮಾಜಿಕ ಸೇವೆ ಬದ್ದತೆಯಿಂದ ಮಾಡುವುದರ ಮೂಲಕ ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡಲು ಶಕ್ತಿ ಬರಲಿ ಎಂದು ವಿಧಾನ ಪರಿಷತ್‌ ಶಾಸಕರಾದ ಐವನ್‌ ಡಿʼಸೋಜಾರವರ ಮಹಾನಗರ ಪಾಲಿಕೆ ಕಛೇರಿಯಲ್ಲಿ ನೂತನವಾಗಿ ನೇಮಕಗೊಂಡ ಆಡಳಿತ ಮಂಡಳಿಯ ಸದಸ್ಯರನ್ನು ಸನ್ಮಾನಿಸಿ ಶುಭ ಹಾರೈಸಿದರು.

ಸಮಾರಂಭದಲ್ಲಿ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ದೇವರಾಜ್‌ ಕೆ. ಮಾತನಾಡಿ ದೇವರ ಕೆಲಸ ಮತ್ತು ಸಮಾಜದ ಕೆಲಸವನ್ನು ತಾರತಮ್ಯ ಮಾಡದೇ ಎಲ್ಲಾ ವರ್ಗ ಗಳ ಜನರನ್ನು ಸಮಾಜಕ್ಕೆ ಒಳಿತಾಗುವುದು ಎಂದು ಶುಭ ಹಾರೈಸಿದರು. ಸಮಾರಂಭದಲ್ಲಿ ಮಂಜುನಾಥೇಶ್ವರ ದೇವಸ್ಥಾನದ ಟ್ರಸ್ಟಿಗಳಾದ ಕಿರಣ್‌ ಜೆ., ಶ್ರೀಮತಿ ಪ್ರೀತಾ ನಂದನ್‌ , ಶ್ರೀಮತಿ ಉಷಾ ಪ್ರಭಾಕರ್‌ , ರಾಜೇಂದ್ರ, ನಾರಾಯಣ್‌ ಕೋಟ್ಯಾನ್‌, ದಿಲ್‌ ರಾಜ್‌ ಆಳ್ವ  ಉಪಸ್ಥಿತರಿದ್ದು ಎಲ್ಲಾರಿಗೂ ಶಾಸಕರು ಸನ್ಮಾನಿಸಿದರು..

ಈ ಸಂದರ್ಭದಲ್ಲಿ ಮಾಜಿ ಕಾರ್ಫೋರೇಟರಾದ ಡಿ.ಕೆ. ಅಶೋಕ್‌ ಕುಮಾರ್‌, ಜೆ. ನಾಗೇಂದ್ರ ಕುಮಾರ್‌, ಅಮೃತ್‌ ವಿ ಕದ್ರಿ, ಭಾಸ್ಕರ್‌ ರಾವ್‌, ಪದ್ಮನಾಭ ಅಮೀನ್‌, ಗಿರೀಶ್‌ ಆಳ್ವ, ವಿಕಾಸ್‌ ಶೆಟ್ಟಿ, ಬಾಜಿಲ್‌ ಕುಲಶೇಖರ್‌  ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular