ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ: 07-4-2026 ರಂದು GOB (1) 44/2025 ಪ್ರಕಾರ ಅಧಿಸೂಚನೆ ಹೊರಡಿಸಿದೆ. 2026ರ ಏಪ್ರಿಲ್ 18ನೇ ತಾರೀಖು ಶನಿವಾರದಂದು, ಕರ್ನಾಟಕ ರಾಜ್ಯ ನ್ಯಾಯಾಂಗ ಅಧಿಕಾರಿಗಳ 22ನೇ ದೈವಾರ್ಷಿಕ ರಾಜ್ಯ ಮಟ್ಟದ ಸಮ್ಮೇಳನವು 2026ರ ಏಪ್ರಿಲ್ 18 ಮತ್ತು 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದೆ.
ಅಧಿಸೂಚನೆಯಲ್ಲಿ, ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ರಾಜ್ಯದ ಜಿಲ್ಲಾ ನ್ಯಾಯಾಲಯಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ (Trial Courts) ನ್ಯಾಯಾಂಗ ಕಲಾಪವಿಲ್ಲದ ದಿನ ಎಂದು ಘೋಷಿಸಲಾಗಿದೆ. 2026ರ ಅಕ್ಟೋಬರ್ 17ನೇ ತಾರೀಖು ಶನಿವಾರವನ್ನು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಂಗ ಕಲಾಪ ದಿನ (Court Sitting Day) ಎಂದು ಘೋಷಿಸಲಾಗಿದೆ.

