ಏ.8-12:ಬೇಲಾಡಿ, ಕಾಂತಾವರ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ

0
368

ಬೇಲಾಡಿ: ಬೇಲಾಡಿ, ಕಾಂತಾವರ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ಏ. 8, 2025 ರಿಂದ ಏ. 12ರವರೆಗೆ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾಮಹೋತ್ಸವ ಜರುಗಲಿದೆ.

ಏಪ್ರಿಲ್ 08 ಮಂಗಳವಾರ ನೂತನ ಬಿಂಬಗಳ ಮೆರವಣಿಗೆ, ಹಸಿರುವಾಣಿ ಹೊರೆಕಾಣಿಕೆ. ಏಪ್ರಿಲ್‌ 09 ಬುಧವಾರ ಆಶ್ಲೇಷಾ ಬಲಿ, ಪ್ರಸನ್ನ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 5:00ರಿಂದ ವೈದಿಕ ವಿಧಿವಿಧಾನಗಳು ನಡೆಯಲಿದೆ.

ಏಪ್ರಿಲ್‌ 10 ಗುರುವಾರದಂದು ಶ್ರೀ ಬ್ರಹ್ಮಬೈದರ್ಕಳ ಪರಿವಾರ ಶಕ್ತಿಗಳ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಸಂಜೆ 5:00ರಿಂದ ಧಾರ್ಮಿಕ ಸಭೆ, ರಾತ್ರಿ ಅಗೇಲು ಸೇವೆ, ಬೈದರ್ಕಳ ದರ್ಶನ, ಅನ್ನಸಂತರ್ಪಣೆ ನಡೆಯಲಿದೆ. ಏ. 11 ಶುಕ್ರವಾರ ಸಂಜೆ 6ರಿಂದ ಶ್ರೀ ಸತ್ಯನಾರಾಯಣ ಪೂಜೆ ಅನ್ನಸಂತರ್ಪಣೆ ರಾತ್ರಿ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ ಹಾಗೂ ಏ.12 ಶನಿವಾರ ಅಪರಾಹ್ನ 2:00ಕ್ಕೆ ಶ್ರೀ ಮಾಯಂದಾಲ ನೇಮೋತ್ಸವ ಜರುಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಏಪ್ರಿಲ್‌ 10 ರಂದು ಗುರುವಾರ ರಾತ್ರಿ 10:00ರಿಂದ ಶಾರದಾ ಆರ್ಟ್ಸ್ (ರಿ.) ಮಂಜೇಶ್ವರ ಇವರ ತುಳು ಹಾಸ್ಯಮಯ ನಾಟಕ ಕಥೆ ಎಡ್ಡೆಂಡು ಪ್ರದರ್ಶನಗೊಳ್ಳಲಿದೆ.

LEAVE A REPLY

Please enter your comment!
Please enter your name here