ಮಂಗಳೂರು : ನಗರದ ಶಕ್ತಿನಗರದ ಕಾನಡ್ಕ ರಸ್ತೆ ಕಾಮಗಾರಿ ಹಾಗೂ ಕಾಂಕ್ರೀಟಿಕರಣ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾದುದು ನಿತ್ಯ ಸಂಚರಿಸುವವರು ನಿಟ್ಟುಸಿರು ಬಿಡುವಂತಾಗಿದೆ. ಕಾಮಗಾರಿಯನ್ನು ಪೂರ್ಣಗೊಳಿಸಿದ ಸ್ಥಳೀಯ ಜನಪ್ರತಿನಿಧಿಯ ಬಗ್ಗೆ ಸ್ಥಳೀಯರು, ವಾಹನ ಮಾಲೀಕರು, ದ್ವಿಚಕ್ರ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಅರ್ಧಕ್ಕೇ ಸ್ಥಗಿತಗೊಂಡಿದ್ದರಿಂದ, ವಾಹನ ಚಲಾಯಿಸುವುದಕ್ಕೆ ಪ್ರಯಾಣಿಕರು, ಸವಾರರು ತೀವ್ರ ಸಂಕಷ್ಟ ಪಡುತ್ತಿದ್ದರು. ಇದು ಮುಖ್ಯ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ಅಡ್ಡರಸ್ತೆಯಾಗಿದ್ದು, ಇದೀಗ ಪದವು ಪಶ್ಚಿಮ ವಾರ್ಡ್ ನಂ. 21 ನ ನಿಕಟಪೂರ್ವ ಕಾರ್ಪೋರೇಟರ್ ವನಿತಾ ಪ್ರಸಾದ್ ಮುತುವರ್ಜಿಯಲ್ಲಿ ಸಂಪೂರ್ಣ ಕಾಮಗಾರಿ ಪೂರ್ಣಗೊಂಡಿದ್ದು ಪ್ರಯಾಣಿಕರಿಗೆ, ವಾಹನ ಚಾಲಕ ಮಾಲೀಕರಿಗೆ ತುಸು ನೆಮ್ಮದಿ, ಸಮಾಧಾನ ತಂದಿದೆ ಎಂಬ ಒಕ್ಕೊರಳ ಅಭಿಪ್ರಾಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
ವರದಿ : ಧನುಷ್ ಶಕ್ತಿನಗರ