ಅರ್ಚನಾ ಪಾಟೀಲರ ಕೃತಿಗೆ “ಜ್ಞಾನ ವಿಶಾರದೆ ಸಮ್ಮಾನ ಪ್ರಶಸ್ತಿ”

0
97

ಜ್ಞಾನ ವಿಶಾರದೆ ಸಮ್ಮಾನ ಪ್ರಶಸ್ತಿಗೆ ಯುವಸಾಹಿತಿ ಅರ್ಚನಾ ಪಾಟೀಲ ರ ‘ಲಾಸ್ಟ ಚಾನ್ಸ ಬದಲಾಗೋಕೆ’ ಕೃತಿ ಆಯ್ಕೆಯಾಗಿದೆ ಎಂದು ಶ್ರೀ ಉತ್ಸವಾಂವ ಪ್ರಕಾಶನ ಇಟ್ಟಿಗಿಯ ಪ್ರಕಾಶಕರು ಮತ್ತು ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ಹಾಚಿ ಇಟ್ಟಿಗಿ ತಿಳಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ಇಟ್ಟಗಿಯ ಶ್ರೀ ಉತ್ಸವಾಂಬ ಪ್ರಕಾಶನ ಇಟ್ಟಿಗಿಯಿಂದ ರಾಜ್ಯೋತ್ಸವ ಪ್ರಯುಕ್ತ ಕೊಡಮಾಡುವ ರಾಜ್ಯಮಟ್ಟದ ಪುಸ್ತಕ ಪುರಸ್ಕಾರ ಜ್ಞಾನ ವಿಶಾರದೆ ಸಮ್ಮಾನ ಪ್ರಶಸ್ತಿಗೆ ಅರ್ಚನಾ ಪಾಟೀಲ ರ ತನುಶ್ರೀ ಪ್ರಕಾಶನದಿಂದ 2024 ರಲ್ಲಿ ಪ್ರಕಟವಾದ “ಲಾಸ್ಟ ಚಾನ್ಸ ಬದಲಾಗೋಕೆ” ಕೃತಿ ಆಯ್ಕೆಯಾಗಿದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here