ಮೂಡುಬಿದಿರೆ : ಹಿಂದೂ ಧರ್ಮ, ದೇವರು, ಸಂಸ್ಕೃತಿಯ ಬಗ್ಗೆ ಅವಾಚ್ಯ,ಅಶ್ಲೀಲ ಪದ ಪ್ರಯೋಗ ಮಾಡಿ ನಾಲಿಗೆ ಹರಿಯಬಿಟ್ಟಿರುವುದನ್ನು ಮುಂದುವರಿಸಿರುವ ಪ್ರೊ.ಕೆ.ಎಸ್ ಭಗವಾನ್ ವಿರುದ್ಧ ಮೊಕದ್ದಮೆ ದಾಖಲು ಮಾಡಿ ಕೂಡಲೇ ಈತನನ್ನು ಬಂಧಿಸಬೇಕೆಂದು ಮೂಡುಬಿದಿರಿ ಶ್ರೀ ವೆಂಕಟರಮಣ ಮತ್ತು ಶ್ರೀ ಹನೂಮಂತ ದೇವಸ್ಥಾನದ ಮೊಕ್ತೇಸರ ಪಡುಮಾರ್ನಾಡು ದಯಾನಂದ ಪೈಯವರು ಹಿಂದೂ ಜನಜಾಗ್ರತಿ ಸಮಿತಿಯವರು ಮೂಡುಬಿದಿರಿ ತಾಲ್ಲೂಕು ಆಫೀಸು ಆವರಣದಲ್ಲಿ ಹಮ್ಮಿಕೊಂಡ ಪ್ರತಿಭಟನಾ ಸಂದರ್ಭದಲ್ಲಿ ಹೇಳಿದರು.
ಅಭಿವ್ಯಕ್ತಿ ಸ್ವಾತಂತ್ರದ ನೆಪದಲ್ಲಿ ಕೋಟ್ಯಾOತರ ಹಿಂದೂಗಳ ಭಾವನೆಗಳಿಗೆ ನೋವನ್ನುOಟುಮಾಡಿರುವ ಭಗವಾನ್ ಕ್ರತ್ಯವನ್ನು ಅವರು ತೀವ್ರವಾಗಿ ಖಂಡಿಸಿದರಲ್ಲದೆ ಸರಕಾರ ಈತನ ಬಂಧನಕ್ಕೆ ಯಾಕೆ ಮೀನಾ ಮೇಷ ಎಣಿಸುತ್ತಿದೆ ಎಂದೂ ಆಕ್ರೋಶ ವ್ಯಕ್ತ ಪಡಿಸಿದರು.ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ನೀಡಲಾದ
ಮನವಿ ಪತ್ರವನ್ನು ತೆರಿಗೆ ಸಲಹೆಗಾರ ಗಣೇಶ್ ರಾವ್ ಅವರು ವಾಚಿಸಿದರು.
ಹಿಂದೂ ಜನಜಾಗ್ರತಿ ಸಮಿತಿಯ ಪ್ರಮುಖ್ ಜಾಹ್ನವಿ ಉಮೇಶ್ ಪೈ,ನೀತಾ ಪ್ರಭು,ಉದ್ಯಮಿ ಚಿದಾನಂದ ಎಸ್ ಸಫಲಿಗ ,ಶ್ರೀ ವೆಂಕರಮಣ ದೇವಸ್ಥಾನದ ಮೊಕ್ತೇಸರ ಅಶೋಕ್ ಮಲ್ಯ, ತನಿಯಪ್ಪ ಕೋಟ್ಯಾನ್, ಪ್ರವೀಣ್ ಭಂಡಾರಿ,ಕಿಶೋರ್ ಭಂಡಾರಿ ದೇವದಾಸ್ ಕಾಮತ್, ಮುರಳೀಧರ ಕಾಮತ್,ಗೋವಿಂದ ಪ್ರಭು, ಮೋಹನ್ ಪ್ರಭು, ವಾಸ್ತು ತಜ್ಞ ರಾಘವೇಂದ್ರ ಭಂಡಾರ್ಕಾರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

