ಸೆ.18ರ ಸಚಿವ ಸಂಪುಟ ಸಭೆಯಲ್ಲಿ ತುಳುವಿಗೆ ಪ್ರಾದೇಶಿಕ ಭಾಷೆಯ ಸ್ಥಾನಮಾನ ಘೋಷಣೆಯಾಗಲಿ: ಕುಶಲಾಕ್ಷಿ ವಿ. ಕುಲಾಲ್

0
6

ಇದೇ ಬರುವ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯಲಿರುವ ಜಿಲ್ಲಾ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಯನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ತಾಲೂಕುಗಳಲ್ಲಿ ಹೆಚ್ಚುವರಿ ಎರಡನೇ ಪ್ರಾದೇಶಿಕ ಭಾಷೆಯಾಗಿ ಪರಿಗಣಿಸಬೇಕೆಂದು ಮಾನ್ಯ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಮುಂದೆ ತುಳುವರೆಲ್ಲರೂ ಸೇರಿ ಒತ್ತಾಯಿಸುತಿದ್ದಾರೆ.
ತುಲು ಒಂದು ಭಾಷೆ ಮಾತ್ರ ಅಲ್ಲ ಅದು ನಮ್ಮ ಸಂಸ್ಕೃತಿ ಮತ್ತು ಪ್ರಕೃತಿ. ಕಾಲ ಕಾಲಕ್ಕೆ ಪ್ರಕೃತಿಯಲ್ಲಿ ಆಗುವ ಬದಲಾವಣೆಯೊಂದಿಗೆ ತುಳುವರ ಆಚರಣೆ,ಹಬ್ಬ ಹರಿದಿನಗಳು ಜೋಡಿಕೊಂಡಿದೆ.ತುಳು ನಮ್ಮ ಅಸ್ಮಿತೆ. ಸುಮಾರು 2000 ವರ್ಷಗಳಿಗಿಂತಲೂ ಹಿರಿತನವುಳ್ಳ ಈ ತುಳು ಭಾಷೆಯ ಸಾಂಸ್ಕೃತಿಕ ಸಿರಿತನ ವಿಶ್ವ ಪ್ರಸಿದ್ಧ.ಸ್ವಾತಂತ್ರ್ಯ ಪೂರ್ವದಲ್ಲಿ ಈ ನಾಡಿಗಾಗಿ ದುಡಿದವರು, ಮಡಿದವರು,ವೀರ ಯೋಧರು,ರಾಜ ಮಹಾರಾಜರು ಹಲವರಿದ್ದಾರೆ, ಸ್ವಾತಂತ್ರ್ಯ ಸಂಗ್ರಾಮದಲ್ಲಿಯೂ ತುಳುನಾಡಿನ ತುಳುವರ ಸೇವೆ ಬಹಳಷ್ಟು ಇದೆ.ಆ ನಂತರದ ದಿನಗಳಲ್ಲಿ ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ರಾಜಕೀಯ,ಸಾಮಾಜಿಕ,ಕಲೆ, ಸಾಹಿತ್ಯ, ವೈಜ್ಞಾನಿಕ, ಕ್ರೀಡಾ, ವೈದ್ಯಕೀಯ,ಸುರಕ್ಷಾ, ಕೃಷಿಯಂತಹ ಎಲ್ಲಾ ಕ್ಷೇತ್ರಗಳಲ್ಲಿ ತುಳುವರು ಈ ದೇಶಕ್ಕೆ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ದೇಶದ ಪ್ರಗತಿಯಲ್ಲಿ ತುಳುವರ ಸೇವೆಯು ಬಹಳಷ್ಟಿದೆ.
ಶಿಲಾ ಶಾಸನಗಳು,ತಾಡೆಯೊಲೆಗಳು ತುಲು ಲಿಪಿಯ ಮೌಲ್ಯವನ್ನು ಎತ್ತಿ ತೋರಿಸಿದರೆ.ಪಾರ್ದನ,ಸಂದಿ,ಬೀರದಂತಹ ಮೌಖಿಕ ಸಾಹಿತ್ಯವು ಇಂದು ಕೂಡಾ ಜೀವಂತವಾಗಿ ತನ್ನ ಮೂಲ ಸೊಗಡನ್ನು ಉಳಿಸಿಕೊಂಡಿದೆ.ದೇಶ ವಿದೇಶದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ಈ ತುಳುನಾಡಿನ, ತುಳು ಭಾಷೆಯು ತುಳುನಾಡಿನಲ್ಲಿ ಇನ್ನಾದರೂ ಪ್ರಾದೇಶಿಕ ಭಾಷೆಯ ಸ್ಥಾನಮಾನ ಪಡೆಯುವಂತಾಗಿಲಿ, ತುಳುವರ ಬಹುದಿನಗಳ ಕನಸು ನನಸಾಗಲಿ.18 ರಂದು ಮಂಗಳೂರಿನಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಇದು ಘೋಷಣೆಯಾಗಲಿ.ತುಳುನಾಡಿನ ಇತಿಹಾಸದಲ್ಲಿ ಈ ದಿನವು ಸ್ವರ್ಣಾಕ್ಷರದಲ್ಲಿ ಬರೆಯುವಂತಾಗಲಿ, ಇದಕ್ಕೆ ಕೇರಳ ಸರಕಾರವೂ ಬೆಂಬಲವನ್ನು ನೀಡಲೀ ಎಂದು ಹಿರಿಯ ತುಳು ಲೇಖಕಿಯಾದ ಶ್ರೀಮತಿ ಕುಶಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ನುಡಿದರು.