ಸೌಹಾರ್ದತೆ ಬೇಕು ಅನ್ನುವವರಿಗೆ ಅರ್ಷಿಯಾ ಖಾನ್ ಅವರು ಒಳ್ಳೆಯ ಉದಾಹರಣೆ : ರಮಿತಾ ಸೂರ್ಯವಂಶಿ ಸಾಮಾಜಿಕ ಚಿಂತಕಿ

0
96

ಅರ್ಷಿಯಾ ಖಾನ್ ಅವರ ಯಕ್ಷಗಾನದ ದೇವಿ ಪಾತ್ರ ಸ್ವಾಗತಾರ್ಹ

ಕಾರ್ಕಳ : ಕರಾವಳಿ ಹಿಂದೂ ಭದ್ರ ಕೋಟೆ ಅನ್ನೋದು ಎಲ್ಲರಿಗೂ ಗೊತ್ತು ಇಂತಹ ಪುಣ್ಯ ಭೂಮಿಯಲ್ಲಿ ಯಕ್ಷಗಾನ ತನ್ನದೇ ಸ್ಥಾನಮಾನ ಉಳಿಸಿಕೊಂಡು ಬಂದಿದೆ, ಕಲೆಯನ್ನು ಯಾರು ಶಿಸ್ತು ಬದ್ಧವಾಗಿ ಪ್ರೀತಿ ಮಾಡುತಾರೆ ಅವರಿಗೆ ಕಲಾ ಸರಸ್ವತಿ ಒಲಿದದ್ದು ನೋಡಿದ್ದೇವೆ, ಬಪ್ಪ ಬ್ಯಾರಿಗೆ ಬಪ್ಪನಾಡು ದುರ್ಗಾ ಪರಮೇಶ್ವರಿ ಒಲಿದಿರುವ ಇಂತಹ ಮಣ್ಣಲ್ಲಿ ಒಬ್ಬಾಕೆ ಮುಸ್ಲಿಂ ಧರ್ಮದ ಹೆಣ್ಣು ಮಗಳು ದೇವಿಯ ಪಾತ್ರದಲ್ಲಿ ಯಕ್ಷಗಾನದಲ್ಲಿ ಕಾಣಿಸಿಕೊಳ್ಳುದಕ್ಕೆ ಖುಷಿಯಲ್ಲಿ ಸ್ವಾಗತಿಸುವ.

ಅವರಿಗೆ ಜೀವನದಲ್ಲಿ ದೈವದ ರೋಚಕ ಅನುಭವವಾಗಿರೋದು ಅವರ ಭಕ್ತಿಯ ಶಕ್ತಿ. ಆಕೆಯು 6ತಿಂಗಳು ವೃತ ಆಚರಣೆ ಮಾಡಿ ಈ ಪಾತ್ರ ಮಾಡುತಾ ಇದ್ದಾರೆ, ಅವರು ಗೋಮಾತೆ ಯನ್ನು ದೇವರುರನ್ನು ಕಾಣುವವರು, ಭೀಫ್- ಮಾಂಸಾಹಾರ ತಿನ್ನಲ್ಲದೆ ಈ ಮಣ್ಣಿನ ಸಂಸ್ಕೃತಿಗೆ ಬೆಲೆ ಕೊಡುತಾ ಇದ್ದಾರೆ, ಅವರ ಜೊತೆ ಇಂದು ಸಮಾಜ ಜೊತೆಯಾಗಿ ನಿಲ್ಲುವ ಅವಶ್ಯಕತೆ ಇದೆ.

ಅರ್ಧ ಅಂಗಿ ಹಾಕಿ ಕುಣಿಯುವರಿಗಿಲ್ಲದ ವಿರೋಧ ನಾವು ಅರ್ಷಿಯಾ ಖಾನ್ ಅವರಿಗೆ ಮಾಡಬಾರದು, ಅವರು ಹಿಂದೂ ಧರ್ಮವನ್ನು ಗೌರವಿಸಿ ಯಕ್ಷಗಾನದಲ್ಲಿ ದೇವಿಯ ಪಾತ್ರ ಮಾಡುತಾ ಇದ್ದಾರೆ ನಿಮ್ಮ ಜೊತೆ ನಾವು ಇದ್ದೇವೆ ಸಹೋದರಿ ನಿಮಗೆ ಶುಭವಾಗಲಿ ನಿಮಂಥವರು ಸದಾ ಹಿಂದೂ ಧರ್ಮದಲ್ಲಿ ಒಡಕನ್ನು ತರುವವರಿಗೆ ಮಾದರಿ ಎಂದು ರಮಿತಾ ಸೂರ್ಯವಂಶಿ ತಿಳಿಸಿದರು.