ಶ್ರೀ ಕ್ಷೇತ್ರ ಶಂಕರಪುರ :- ಆತ್ಮ ತಪೋವನ ಆಶ್ರಮ ಮಾಹಿತಿ ಪತ್ರ ಬಿಡುಗಡೆ

0
16

ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ ದೇವಸ್ಥಾನ ಇದರ ವತಿಯಿಂದ ಸಂಕಲ್ಪ ಆತ್ಮ ತಪೋವನ ಆಶ್ರಮ ಇದರ ಮಾಹಿತಿ ಮತ್ತು ಮನವಿ ಪತ್ರ ಇಂದು ಬಿಡುಗಡೆಗೊಳಿಸಲಾಯಿತು.

ಕ್ಷೇತ್ರದ ಏಕ ಜಾತಿ ಧರ್ಮ ಪೀಠದ ಪೀಠಾಧೀಶರಾದ ಶ್ರೀ ಸಾಯಿ ಈಶ್ವರ ಗುರೂಜಿ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಿದರು. ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲಾಗುವ ಈ ಆಶ್ರಮದಲ್ಲಿ ವಿವಿಧ ಕೇಂದ್ರಗಳು ನಿರ್ಮಾಣಗೊಳ್ಳಲಿವೆ ಈ ಕೇಂದ್ರಗಳಿಗೆ ಭಕ್ತರು ನೆರವು ನೀಡಲು ಅನೇಕ ರೀತಿಯ ಅಂಶಗಳನ್ನು ಈ ಮಾಹಿತಿ ಪತ್ರದಲ್ಲಿ ಒದಗಿಸಲಾಗಿದೆ.

ಕಾರ್ಯಕ್ರಮದಲ್ಲಿ ಕ್ಷೇತ್ರದ ಟ್ರಸ್ಟಿಗಳಾದ ಗೀತಾಂಜಲಿ ಸುವರ್ಣ, ಸತೀಶ್ ದೇವಾಡಿಗ ಆಡಳಿತ ಮಂಡಳಿಯ ಸತೀಶ್ ಶೇಟ್, ವೀಣಾ ಶೆಟ್ಟಿ, ನಾಗರಾಜ್ ಬೈಂದೂರು, ಶ್ರೀಧರ್ ಶಾಂತಿ, ವಾರಿಜಾ ಕಲ್ಮಾಡಿ, ಲಾವಣ್ಯ ವಿನೋದ್ ಕುಮಾರ್, ವಿಜಯ್ ಕುಂದರ್, ರಾಜೇಶ್ ಇನ್ನಂಜೆ, ಶ್ವೇತಾ ಜಯರಾಮ ಶೆಟ್ಟಿಗಾರ್, ಪ್ರತಿಮ ಪ್ರಭಾಕರ್, ಜ್ಯೋತಿ ಶೆಟ್ಟಿ, ಚೇತನ ಶೆಟ್ಟಿ, ವಿಘ್ನೇಶ್ ನೀಲಾವರ ಮುಂತಾದವರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ ವಂದಿಸಿದರು.