ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಜಯಂಟ್ಸ ಕ್ಯಾರ್ ಪೌಂಡೇಶನ ( ರಿ ) ಬೃಹ್ಮಾವರ ಸುವರ್ಣ ಎಂಟರ್ಪ್ರೈಸಸ್

0
24

ಬ್ರಹ್ಮಾವರ : ವತಿಯಿಂದ ಹಾಗೂ ಡಾ. ಎ. ವಿ. ಬಾಳಿಗ ಆಸ್ಪತ್ರೆ, ಹಾರಾಡಿ ಇವರ ಸಹಯೋಗದಲ್ಲಿ ಆಸ್ಪತ್ರೆಯ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಡಾ. ಎ. ವಿ. ಬಾಳಿಗ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಪಿ. ವಿ. ಭಂಡಾರಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.

ಜಯಂಟ್ಸ ಗ್ರೂಪ್ ಆಫ್ ಬ್ರಹ್ಮಾವರದ ಅಧ್ಯಕ್ಷರಾದ ಅಣ್ಣಯ್ಯ ದಾಸ್ ಬ್ರಹ್ಮಾವರ ಅರಣ್ಯಾಧಿಕಾರಿ ರಾಮಚಂದ್ರ ನಾಯ್ಕ್, ಕಾರ್ಯಕ್ರಮ ಸಂಘಟಕ ಮಧುಸೂದನ್ ಹೇರೂರು, ಕಾರ್ಯದರ್ಶಿ ಮಿಲ್ಟನ್ ಒಲಿವೇರಾ, ರೊನಾಲ್ಡ್ ಡಯಾಸ್, ಆಸ್ಪತ್ರೆಯ ಸಿಬ್ಬಂದಿ ವರ್ಗ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಮೆರುಗು ನೀಡಿದರು.

ಈ ಸಂದರ್ಭದಲ್ಲಿ ಕಳೆದ ವರ್ಷ ಇದೇ ಆವರಣದಲ್ಲಿ ನೆಡಲಾಗಿದ್ದ ಗಿಡಗಳ ಪೋಷಣೆಯ ಬಗ್ಗೆ ಸಿಬ್ಬಂದಿ ವರ್ಗವನ್ನು ಜಾಯಿಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ವತಿಯಿಂದ ಶ್ಲಾಘನೆ ವ್ಯಕ್ತಪಡಿಸಿದರು. ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು. ಆಸ್ಪತ್ತೆಯ ಕರುಣಾಕರ ಮತ್ತು ನಾಗರಾಜ ಸಹಕರಿಸಿದರು

LEAVE A REPLY

Please enter your comment!
Please enter your name here