ಕಲಾಕುಂಚ ಅತ್ತಿಗೆರೆ ಶಾಖೆಯಿಂದ ಆಷಾಡ ಮಾಸದ ಪ್ರಯುಕ್ತ ಸುಸಂಪನ್ನಗೊಂಡ ಶ್ರೀ ದುರ್ಗಾದೇವಿಯ ಅಷ್ಟೋತ್ತರ

0
14

ದಾವಣಗೆರೆ : ದಾವಣಗೆರೆ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅತ್ತಿಗೆರೆ ಗ್ರಾಮೀಣ ಪ್ರದೇಶದ ಶಾಖೆಯವತಿಯಿಂದ ಇತ್ತೀಚಿಗೆ ಆಷಾಡ ಮಾಸದ ಪವಿತ್ರ ಶುಕ್ರವಾರದಂದು ಅತ್ತಿಗೆರೆಯ ಶ್ರೀ ವೀರಭದ್ರೇಶ್ವರ ನಿಲಯದ ಸಭಾಂಗಣದಲ್ಲಿ ಕಲಾಕುಂಚ ಅತ್ತಿಗೆರೆ ಶಾಖೆಯ ಮುತ್ತೈದೆಯರು ಭಕ್ತಿಭಾವದಿಂದ ಶ್ರೀ ದುರ್ಗಾದೇವಿಯ ಅಷ್ಟೋತ್ತರ ಶತನಾಮಾವಳಿ, ಶ್ರೀ ದುರ್ಗಾ ಸಹಸ್ರನಾಮ ಹಾಗೂ ಹನುಮಾನ್ ಚಾಲೀಸಾ ಭಕ್ತಿ ಭಾವದಿಂದ ಪಠಿಸಿದರು.

ಈ ಸಂದರ್ಭದಲ್ಲಿ ಮಾನವನ ಜೀವನದಲ್ಲಿ ಶೋಷಣೆ, ಅಹಿಂಸೆ, ದಬ್ಬಾಳಿಕೆ ಹಾಗೂ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಅನ್ಯಾಯಗಳು ಸಂಪೂರ್ಣವಾಗಿ ನಿರ್ಮೂಲನೆಯಾಗಲಿ ಎಂಬ ಸಂಕಲ್ಪದೊಂದಿಗೆ ತಾಯಿ ಶ್ರೀ ದುರ್ಗಾ ಪರಮೇಶ್ವರಿಯವರಲ್ಲಿ ಪ್ರಾರ್ಥನೆ ಮಾಡಿದರು ಎಂದು ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ ತಿಳಿಸಿದರು.

ಕಲಾಕುಂಚ ಅತ್ತಿಗೆರೆ ಶಾಖೆಯ ಅಧ್ಯಕ್ಷರಾದ ಶೈಲಜಾ ಪ್ರಶಾಂತ್ ಸಮಿತಿ ಸದಸ್ಯರಾದ ಕವಿತಾ ರಮೇಶ್, ಕವಿತಾ ಅರುಣ್, ಮಂಜುಳಾ ಬಸವರಾಜ್, ಆಶಾ ವಸಂತ್, ಗಂಗಾ ಮಲ್ಲಿಕಾರ್ಜುನ್, ಸಹನಾ ಅನಿಲ್‌ಕುಮಾರ್, ಅನುಸೂಯ ಉಜ್ಜಪ್ಪ ಮುಂತಾದವರು ಉಪಸ್ಥಿತರಿದ್ದರು.