ವಿಶ್ವ ತಾಯಂದಿರ ದಿನದಂದು ಹೊಸದಿಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯು, ವಿಶ್ವ ಕೊಂಕಣಿ ಕೇಂದ್ರದ ಸಹಯೋಗದೊಂದಿಗೆ ಸ್ತ್ರೀ ಲೇಖಕಿಯರ ಸಾಹಿತ್ಯ ಪ್ರಸ್ತುತಿ ಮತ್ತು ಆಸ್ವಾದನೆಗೆ ಮೀಸಲಾದ ‘ಅಸ್ಮಿತಾ’ ವಿಶೇಷ ಕಾರ್ಯಕ್ರಮವು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗಿತು.
ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ವಿಜೇತೆ ವಿಲ್ಮಾ, ಬಂಟ್ವಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ತಾಯ್ತನಕ್ಕೆ ಸಂಬಂದಿಸಿದ ಕವಿತೆಗಳನ್ನು ವಾಚಿಸಿದರು.
ಡಯನಾ ಶರಲ್ ಲೋಬೊ, ಮೇರಿ ಸಲೊಮಿ ಡಿ ಸೋಜ ಕವಿತೆ, ಫೆಲ್ಸಿ ಲೋಬೊ ಪ್ರಬಂದ ಮತ್ತು ಸ್ಮಿತ ಪ್ರಜ್ಞ ಸಣ್ಣ ಕತೆ ಪ್ರಸ್ತುತ ಪಡಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿ ಸಂಚಾಲಕ ಕವಿ ಮೆಲ್ವಿನ್ ರೊಡ್ರಿಗಸ್ ಸಾಹಿತ್ಯ ಅಕಾಡೆಮಿಯ ಚಟುವಟಿಕೆಗಳು ಮತ್ತು ಅಸ್ಮಿತಾ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿಶ್ವ ಕೊಂಕಣಿ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ದೇವದಾಸ ಪೈ ಸ್ವಾಗತ ಕೋರಿದರು. ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿ ಸದಸ್ಯ ಸಾಹಿತಿ, ಪತ್ರಕರ್ತ ಎಚ್. ಎಂ. ಪೆರ್ನಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಂಗಳೂರು, ಉಡುಪಿ, ಕೇರಳದಿಂದ ಸಾಹಿತಿಗಳು ಮತ್ತು ಸಾಹಿತ್ಯಾಸಕ್ತರು ಹಾಜರಿದ್ದರು.