ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್, ಜಿಲ್ಲೆ 275 S ವತಿಯಿಂದ ಶಾಲಾ ಮಕ್ಕಳಿಗೆ ಪರಿಸರ ಜಾಗೃತಿ ಬಗ್ಗೆ ಗ್ರೀನ್ ಪೋಸ್ಟರ್ ಚಿತ್ರಕಲಾ ಸ್ಪರ್ಧೆ

0
90

ಮಂಗಳೂರು : ಅಸೋಸಿಯೇಷನ್‌ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್, ಡಿಸ್ಟಿಕ್ಸ್ 275 S, ಉಡುಪಿ ಇದರ ವತಿಯಿಂದ, ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಸಲುವಾಗಿ ” ಅಲಯನ್ಸ್ ಗ್ರೀನ್ ಅವಾರ್ಡ್ ” ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದ ಅನ್ವಯ 4 ರಿಂದ 8 ವರ್ಷ ಹಾಗೂ 9 ರಿಂದ 15 ವರ್ಷಗಳ ವರೆಗಿನ ವಯೋಮಿತಿಯ ಶಾಲಾ ವಿದ್ಯಾರ್ಥಿಗಳಿಗೆ “ಗ್ರೀನ್ ಪೋಸ್ಟರ್” ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಇದೊಂದು ಚಿತ್ರಕಲಾ (ಡ್ರಾಯಿಂಗ್) ಸ್ಪರ್ಧೆಯಾಗಿದ್ದು ಮೇಲಿನ ವಯೋಮಿತಿಯ ಶಾಲಾ ವಿದ್ಯಾರ್ಥಿಗಳು, Inspired by Nature. For Climate. For Future ಎನ್ನುವ ತತ್ವವನ್ನು ಅಳವಡಿಸಿಕೊಂಡು ನಿಗದಿತ ಸೈಜಿನ ಹಾಳೆಯಲ್ಲಿ ( ಡ್ರಾಯಿಂಗ್ ಶೀಟ್ :- 22″ X 13″ ಅಳತೆ ) ಕಲಾಕೃತಿಯನ್ನು ರಚಿಸತಕ್ಕದ್ದು.

ಈ ಸ್ಪರ್ಧೆಯು ಆಯಾಯ ಶಾಲೆಯ ಮುಖ್ಯೋಪಾಧ್ಯಾಯರ ಅಥವಾ ಸಂಬಂಧಪಟ್ಟ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಜುಲೈ 15 ರ ಒಳಗಡೆ ನಡೆಸುವುದು. ಹೀಗೆ ರಚಿಸಿದ ಕಲಾಕೃತಿಯನ್ನು ಸಂಬಂಧಪಟ್ಟ ಶಾಲೆಗಳು ಜುಲೈ 28ರ ಒಳಗಾಗಿ ಆಯಾಯ ಅಲಯನ್ಸ್ ಕ್ಲಬ್ ಗಳ ಮೂಲಕ, ಅಲಯನ್ಸ್ ಡಿಸ್ಟ್ರಿಕ್ಟ್ 275 ಖ ಇವರಿಗೆ ತಲುಪಿಸುವುದು.

ಹೀಗೆ ರಚಿಸಿದ ಕಲಾಕೃತಿಗಳನ್ನು ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಗೆ ಕಳುಹಿಸಲಾಗಿ ಅಲ್ಲಿ ಪ್ರಥಮ ಬಂದ ಕಲಾಕೃತಿಗೆ ರೂ. 50,000/- ಟ್ರೋಫಿ ಹಾಗೂ ಸರ್ಟಿಫಿಕೇಟ್, ದ್ವಿತೀಯ ರೂ. 25,000/- ಟ್ರೋಫಿ ಹಾಗೂ ಸರ್ಟಿಫಿಕೇಟ್, ತೃತೀಯ ರೂ. 15,000/-, ಟ್ರೋಫಿ ಹಾಗೂ ಸರ್ಟಿಫಿಕೇಟ್ ಹಾಗೂ ಸಮಾಧಾನಕರ ಬಹುಮಾನವಾಗಿ ರೂ. 5,000/- ಮತ್ತು ಸರ್ಟಿಫಿಕೇಟ್ ನೀಡಲಾಗುತ್ತದೆ. ಮೇಲಿನ ಸ್ಪರ್ಧಾ ವಿಜೇತರನ್ನು ಅಗಸ್ಟ್ 15, 2026 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಜರುಗುವ ಸಮಾರಂಭದಲ್ಲಿ ಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಗುವುದು.

ಜುಲೈ 20ರ ಒಳಗೆ ಅಲಯನ್ಸ್ ಕ್ಲಬ್ ಮಂಗಳೂರಿಗೆ ತಲುಪಿಸಲು ಅಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷರಾದ ಜಿ ಕೆ ಹರಿಪ್ರಸಾದ್ ರೈ ಕಾರಮೊಗರು ಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ . ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆ ಯ ಮುಖ್ಯೋಪಾಧ್ಯಾಯರು ಅಥವಾ ಅಧ್ಯಾಪಕ ವೃಂದದವರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ 8660377357 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here