ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ದನ ಕಳ್ಳತನಕ್ಕೆ ಯತ್ನ

0
7

ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

ಉಡುಪಿ: ಪರ್ಕಳ ಮಹಾಲಿಂಗೇಶ್ವರ ದೇವಸ್ಥಾನದ ಸಮೀಪ ಭಾನುವಾರ (ನ.15) ಮುಂಜಾನೆ ದನ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಕಾರಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ದೇವಸ್ಥಾನದ ಸಮೀಪ ಮಲಗಿದ್ದ ದನಗಳನ್ನು ಕಳವು ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಕಾರಿನಿಂದ ಇಳಿದು ದನಗಳ ಬಳಿ ಬರುತ್ತಿದ್ದ ಇಬ್ಬರನ್ನು ಕಂಡ ದನಗಳ ಹಿಂಡು ಬೆದರಿ ಅಲ್ಲಿಂದ ಓಡಿ ಹೋಗಿದೆ. ಇದರಿಂದ ದನಗಳು ಕಳ್ಳರ ಕೈಗೆ ಸಿಗದೆ ಬಚಾವ್ ಆಗಿವೆ.

ದನಗಳು ಓಡಿ ಹೋದ ಬಳಿಕವೂ ಕೆಲಕಾಲ ಸ್ಥಳದಲ್ಲಿಯೇ ಕಾದಿದ್ದ ಅಪರಿಚಿತರು, ನಂತರ ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಘಟನೆಯ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಂಜಾನೆಯ ವೇಳೆ ನಡೆದ ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ದನ ಕಳ್ಳತನಕ್ಕೆ ಯತ್ನಿಸಿದವರನ್ನು ಪತ್ತೆಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.