ಸಜೀಪ ಕ್ಷೇತ್ರದಲ್ಲಿ ದೀಪಾವಳಿ ಸಂಭ್ರಮ : ಶ್ರೀ ಉಳ್ಳಾಲ್ಟಿ–ನಾಲ್ಕೈತಾಯ ದೈವಗಳಿಗೆ ನವಕಲಶಾಭಿಷೇಕ ಸೇವೆ

0
17

ಸಜೀಪ: ಮಾಗಣೆ ಪಡ್ಡೆರಮಾಡ ಶ್ರೀ ನಡಿಯೇಳುದೈವಗಳು ಹಾಗೂ ಶ್ರೀ ಉಳ್ಳಾಲ್ಟಿ–ಶ್ರೀ ನಾಲ್ಕೈತಾಯ ಕ್ಷೇತ್ರದಲ್ಲಿ ಪಂಚಪರ್ವಗಳಲ್ಲಿ ಒಂದಾದ ದೀಪಾವಳಿ ಹಬ್ಬದ ಪ್ರಯುಕ್ತ ನವಕಲಶಾಭಿಷೇಕ ಪರ್ವ ಸೇವೆ ಭಕ್ತಿಭಾವದಿಂದ ನಡೆಯಿತು.

ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನವಕಲಶಾಭಿಷೇಕ ಸೇವೆ ನೆರವೇರಿತು. ಕ್ಷೇತ್ರದ ಸಂಪ್ರದಾಯ ಹಾಗೂ ಧಾರ್ಮಿಕ ಆಚರಣೆಗಳಿಗೆ ಅನುಗುಣವಾಗಿ ನಡೆದ ಈ ಸೇವೆಯಲ್ಲಿ ಭಕ್ತರು ಭಾಗವಹಿಸಿ ದೈವಗಳ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಬಿಜಂದಾರು ಗುತ್ತು ಶಿವರಾಮ ಭಂಡಾರಿ ಸೇರಿದಂತೆ ಮಾಗಣೆಯ ಪ್ರಮುಖರು ಉಪಸ್ಥಿತರಿದ್ದರು.