ಹಿಂದೂ ಸಂಘಟನೆ ಮುಖಂಡ ಶಮಿತ್ ರಾಜ್ ದರೆಗುಡ್ಡೆ ಅವರ ಸಹೋದರನ ಕೊಲೆ ಯತ್ನ

0
704

ಮೂಡುಬಿದಿರೆ: ಹಿಂದೂ ಸಂಘಟನೆ ಮುಖಂಡ ಶಮಿತ್ ರಾಜ್ ದರೆಗುಡ್ಡೆ ಅವರ ಸಹೋದರ ಸಂತೋಷ್ ಅವರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೆಗುಡ್ಡೆ ಗ್ರಾಮದ ರಬ್ಬರ್ ತೋಟ ಎಂಬಲ್ಲಿ ಎ. 5 ರ ಶನಿವಾರ ಸಂಜೆ ಈ ಘಟನೆ ನಡೆದಿದ್ದು ಅದೇ ಪರಿಸರದ ಗಣೇಶ್ ಹಾಗೂ ಅಕ್ಷಿತ್ ಈ ಪ್ರಕರಣದ ಆರೋಪಿಗಳಾಗಿದ್ದಾರೆ.

ಸಂತೋಷ್ ಅವರು ಭಾನುವಾರ ಸಂಜೆ ತನ್ನ ಆಕ್ಟಿವಾದಲ್ಲಿ ವಾಪಾಸು ಮನೆಗೆ ಬರುತ್ತಿರುವಾಗ ರಿಕ್ಷಾದಲ್ಲಿ ಬಂದ ಆರೋಪಿಗಳು ಅವರನ್ನು ಅಡ್ಡಗಟ್ಟಿ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ್ದಾರೆ. ಸಂತೋಷ್ ಅವರ ಕಾಲಿಗೆ ತಲವಾರು ಏಟು ಬಿದ್ದಿದ್ದು ಅವರನ್ನು ಕಾರ್ಕಳ ಸ್ಪಂದನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂರ್ವ ದ್ವೇಷವೆ ಹಲ್ಲೆಗೆ ಕಾರಣವೆನ್ನಲಾಗಿದೆ. ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ.ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here