Saturday, April 26, 2025
Homeಮಂಗಳೂರುಉಚಿತ ಶ್ರವಣ ತಪಾಸಣಾ ಶಿಬಿರ‌

ಉಚಿತ ಶ್ರವಣ ತಪಾಸಣಾ ಶಿಬಿರ‌

ಮಂಗಳೂರು : ಟೀಮ್ ಈಶ್ವರ್ ಮಲ್ಪೆ ವತಿಯಿಂದ ದ.ಕ. ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ  ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಎರಡು ದಿನಗಳ ಉಚಿತ ಶ್ರವಣ ತಪಾಸಣಾ  ಶಿಬಿರ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣೆ ಕಾರ್ಯಕ್ರಮ ಭಾನುವಾರ ಆರಂಭಗೊಂಡಿತು.

ಶಿಬಿರದ ಫಲಾನುಭವಿ ಮರಿಯಮ್ಮ ಶಿಬಿರ ಉದ್ಘಾಟಿಸಿದರು.

ಟೀಮ್ ಈಶ್ವರ್ ಮಲ್ಪೆ ತಂಡದ ಸಂಯೋಜಕ ಲವ ಬಂಗೇರ ಮಾತನಾಡಿ ” ಶ್ರವಣ ದೋಷ  ಇರುವವರ ಜತೆ ಸಹಾನುಭೂತಿಯಿಂದ ವರ್ತಿಸಬೇಕು. ಅವರಿಗೆ ಮನೋ ಸ್ಥೈರ್ಯ ನೀಡಬೇಕು. ಶ್ರವಣ  ಸಮಸ್ಯೆ ಇರುವವರಿಗೆ ನೆರವಾಗುವ ಉದ್ದೇಶದಿಂದ  ಟೀಂ ಈಶ್ವರ್ ಮಲ್ಪೆ  ಉಚಿತ ಶಿಬಿರ ಆಯೋಜಿಸುತ್ತಿದ್ದು , ಇದು  23ನೇ  ಶಿಬಿರವಾಗಿದೆ ಎಂದರು.

ಡಾ.ಅಂಕಿತ ಮಾತನಾಡಿ‌” ಹಿರಿಯ ನಾಗರಿಕರಿಗೆ  ಶ್ರವಣ ಸಮಸ್ಯೆ ಸಾಮಾನ್ಯ. ಇಂತಹ ಸಂದರ್ಭದಲ್ಲಿ ಅವರಿಗೆ ಮಾನಸಿಕ  ಬೆಂಬಲದ ಜೊತೆಗೆ ಶ್ರವಣ ಸಾಧನಗಳು ಸಹಕಾರಿಯಾಗಿದೆ ಎಂದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ  ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ ವಂದಿಸಿದರು.‌ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್.ಕಾರ್ಯಕ್ರಮ ನಿರೂಪಿಸಿದರು.

ನಗರದ ಪತ್ರಿಕಾ ಭವನದಲ್ಲಿ‌  ಏ.7ರಂದು‌‌ ಉಚಿತ ಶ್ರವಣ ತಪಾಸಣಾ ಶಿಬಿರ ನಡೆಯಲಿದ್ದು ಬೆಳಗ್ಗೆ 11ರೊಳಗೆ ಮೊಬೈಲ್ ಸಂಖ್ಯೆ  9902344399)ಸಂಪರ್ಕಿಸಿ ಹೆಸರು ನೋಂದಾಯಿಸಬಹುದು. ಪತ್ರಕರ್ತರ ಕುಟುಂಬದ ಸದಸ್ಯರು ಶಿಬಿರದ ಪ್ರಯೋಜನ ಪಡೆಯಬಹುದು‌. 

RELATED ARTICLES
- Advertisment -
Google search engine

Most Popular