ಫೆ.1ರಂದು ಕಲಾಕುಂಚ ಗ್ರಾಮೀಣ ಪ್ರದೇಶದ ಅತ್ತಿಗೆರೆ ಶಾಖೆ ಉದ್ಘಾಟನೆ

0
47

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯವತಿಯಿAದ ದಾವಣಗೆರೆ ಜಿಲ್ಲೆಯ ಅತ್ತಿಗೆರೆ ಗ್ರಾಮೀಣ ಪ್ರದೇಶದ ಶಾಖೆ ಫೆ. 1 ರಂದು ಭಾನುವಾರ ಬೆಳಿಗ್‌ಗೆ10.30 ಕ್ಕೆ ಅತ್ತಿಗೆರೆಯ ಶ್ರೀ ವೀರಭದ್ರೇಶ್ವರ ನಿಲಯ ಸಭಾಂಗಣದಲ್ಲಿ ಉದ್ಘಾಟನೆಯಾಗಲಿದೆ ಎಂದು ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ತಿಳಿಸಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಅತ್ತಿಗೆರೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಜಗದೀಶ್ ಸಿ.ಎಸ್. ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ವಹಿಸಿಕೊಳ್ಳಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್, ಕಲಾಕುಂಚ ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಅತ್ತಿಗೆರೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಮಾಂತಮ್ಮ ಬಸವರಾಜಪ್ಪ, ಅತ್ತಿಗೆರೆ ಗ್ರಾಮ ಪಂಚಾಯಿತಿಯ ಸದಸ್ಯರಾದ ವಿಜಯಕುಮಾರ್ ಕೆ.ಎಂ. ಆಗಮಿಸಲಿದ್ದಾರೆ. ಗೌರವ ಉಪಸ್ಥಿತಿಯಾಗಿ ಕಲಾಕುಂಚ ಅತ್ತಿಗೆರೆ ಶಾಖೆ ನೂತನ ಅಧ್ಯಕ್ಷರಾದ ಶೈಲಜಾ ಪ್ರಶಾಂತ್ ಇರುತ್ತಾರೆ.

ಈ ಗ್ರಾಮೀಣ ಪ್ರದೇಶದ ಅತ್ತಿಗೆರೆ ಶಾಖೆ ಉದ್ಘಾಟನಾ ಸಮಾರಂಭಕ್ಕೆ ಸಾರ್ವಜನಿಕವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ಅತ್ತಿಗೆರೆ ಶಾಖೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here