ಬ್ರಹ್ಮಾವರ : ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ೧೦ ದಿನಗಳ ಪಿಎಂಇಜಿಪಿ ಇಡಿಪಿ ತರಬೇತಿಯ ಸಮಾರೋಪ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸೀತಾರಾಮ ಶೆಟ್ಟಿ¸, ಉಪ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ಅವರು ರುಡ್‌ಸೆಟ್‌ನ ತರಬೇತಿಯು ತುಂಬಾ ಪರಿಣಾಮಕಾರಿಯಾಗಿದ್ದು, ಸ್ವ ಉದ್ಯೋಗ ಪ್ರಾರಂಬಿಸಲು ಸಹಕಾರಿಯಾಗಿದೆ ಹಾಗೂ ಕಳೆದ ಎರಡು ವರ್ಷಗಳಿಂದ ಪಿ.ಎಂ.ಇ.ಜಿ.ಪಿ(ಪ್ರದಾನ ಮಂತ್ರಿ ಉದ್ಯೋಗ ಸೃಜನ ಯೋಜನೆ) ಪಲಾನುಭವಿಗಳಿಗೆ ಆನ್‌ಲೈನ್ ತರಬೇತಿಯ ಆಯ್ಕೆಗೆ ಅವಕಾಶ ಇತ್ತು, ಆದರೆ ಈಗ ಸರ್ಕಾರವು ಆನ್‌ಲೈನ್ ತರಬೇತಿಯನ್ನು ಸ್ತಗಿತಗೊಳಿಸಿ ರುಡ್‌ಸೆಟ್/ಆರ್‌ಸೆಟಿ ತರಬೇತಿ ಸಂಸ್ಥೆಯಲ್ಲಿ ಆಪ್‌ಲೈನ್ ತರಬೇತಿ ಕಡ್ಡಾಯಗೊಳಿಸಿದೆ. ಇದರಿಂದ ಪಲಾನುಭವಿಗಳಿಗೆ ತರಬೇತಿಯು ಪರಿಣಾಕಾರಿಯಾಗಿ ಸಿಗುವಂತಾಗಿದೆ ಎಂದು ಹೇಳಿ ಶಿಭಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.

ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಡಾ.ಬೊಮ್ಮಯ್ಯ ಎಂ ಮಾತನಾಡಿ ತರಬೇತಿಯ ಅನುಭವಗಳನ್ನು ನಿಮ್ಮ ಪ್ರೀತಿಪಾತ್ರರಲ್ಲಿ ಹಂಚಿಕೊಳ್ಳಿ ಹಾಗು ಅವರನ್ನು ಸ್ವ ಉದ್ಯೋಗವನ್ನು ಮಾಡುವಲ್ಲಿ ಪ್ರೇರೆಪಿಸಿ ಅಲ್ಲದೆ ಬ್ಯಾಂಕ್‌ನ ಮಾಹಿತಿ,ಮಾರ್ಗದರ್ಶನ ಬೇಕಾದಲ್ಲಿ ಸಂಸ್ಥೆಯನ್ನು ಸಂಪರ್ಕಿಸಿ ಎಂದು ಹೇಳಿ ಶಿಭಿರಾರ್ಥಿಗಳಿಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿ, ಹಿರಿಯ ಕಛೇರಿ ಸಹಾಯಕರಾದ ರವಿಯವರು ಸ್ವಾಗತ ಮತ್ತು ಧನ್ಯವಾದ ಕೋರಿದರು. ತರಬೇತಿಯಲ್ಲಿ ಪಿ.ಎಂ.ಇ.ಜಿ.ಪಿ ಯೋಜನೆಯ ೩೫ ಶಿಭಿರಾರ್ಥಿಗಳು ಪಲಾನುಭವಿಗಳು ಭಾಗವಹಿಸಿದ್ದರು.

