ಕಾಪು : ತಾಲೂಕಿನ ಕುಲಾಲ ಸಂಘ (ರಿ ) ಕಾಪು ವಲಯ ಇದರ ಮಹಿಳಾ ಘಟಕದ ವತಿಯಿಂದ ದ್ವಿತೀಯ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಆಗಸ್ಟ್ 28 ರಂದು ಸಂಜೆ 4 ಗಂಟೆಗೆ ಸರಿಯಾಗಿ ಸಂಘದ ಕಚೇರಿ ಪಡುಕುತ್ಯಾರು ಆನೆಗುಂದಿ ಮಠದ ಬಳಿ ನಡೆಯಲಿದೆ.
ಈ ಪೂಜಾ ಕೈಕರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತ ಆಗಮಿಸಿ,ಶ್ರೀ ದೇವರ ಪೂರ್ಣ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುವರು.

