ಮಣಿಪಾಲ : ಮಣಿಪಾಲ ಆರೋಗ್ಯ ಕಾರ್ಡ್ 2026ರ ನೋಂದಣಿಗೆ ಆಗಸ್ಟ್ 31, 2026 ಕೊನೆಯ ದಿನಾಂಕವಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಸಾರ್ವಜನಿಕರಿಗೆ ಆಹ್ವಾನ ನೀಡಿದೆ.
26 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಕಾರ್ಯಕ್ರಮದಡಿ ಪ್ರಸ್ತುತ ಸುಮಾರು 6.5 ಲಕ್ಷ ಸದಸ್ಯರು ಪ್ರಯೋಜನ ಪಡೆಯುತ್ತಿದ್ದಾರೆ. “ಸಂಪೂರ್ಣ ಕುಟುಂಬಕ್ಕಾಗಿ, ಶ್ರೇಷ್ಠ ಮೌಲ್ಯ, ವಿಶ್ವಾಸಾರ್ಹ ಸೇವೆ” ಎಂಬ ಘೋಷವಾಕ್ಯದ ಅಡಿಯಲ್ಲಿ ಮಾಹೆ ಸಮೂಹ ಆಸ್ಪತ್ರೆಗಳಲ್ಲಿ ವ್ಯಾಪಕ ಆರೋಗ್ಯ ಪ್ರಯೋಜನಗಳನ್ನು ಈ ಕಾರ್ಡ್ ನೀಡುತ್ತದೆ. ನೋಂದಣಿಯ ನಂತರ ತಿಂಗಳ 15ನೇ ತಾರೀಖಿನಿಂದ ಪ್ರಯೋಜನಗಳು ಜಾರಿಗೆ ಬಂದು, 15 ಆಗಸ್ಟ್ 2027ರವರೆಗೆ ಮಾನ್ಯವಾಗಿರುತ್ತವೆ.
ಕಾರ್ಡಿನ ವಿಧಗಳು:
- ವೈಯಕ್ತಿಕ ಸದಸ್ಯತ್ವ: ವರ್ಷಕ್ಕೆ ₹350
- ಕೌಟಂಬಿಕ ಸದಸ್ಯತ್ವ: ವರ್ಷಕ್ಕೆ ₹700
- ಕೌಟಂಬಿಕ ಪ್ಲಸ್ ಸದಸ್ಯತ್ವ: ವರ್ಷಕ್ಕೆ ₹900
ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ತಜ್ಞ ಸಮಾಲೋಚನೆ ಶುಲ್ಕಗಳಲ್ಲಿ ಶೇ. 50, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇ. 25, ರೇಡಿಯಾಲಜಿ ಸೇವೆಗಳಲ್ಲಿ ಶೇ. 20 ಸೇರಿದಂತೆ ಹಲವು ರಿಯಾಯಿತಿಗಳು ಲಭ್ಯ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿಎಂಎ ಪೈ ಆಸ್ಪತ್ರೆ, ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ, ಮಂಗಳೂರು ಮತ್ತು ಅತ್ತಾವರದ ಕೆಎಂಸಿ ಆಸ್ಪತ್ರೆಗಳು, ಕಟೀಲಿನ ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಹಾಗೂ ಮಣಿಪಾಲ ದಂತ ಮತ್ತು ಆಯುರ್ವೇದ ಆಸ್ಪತ್ರೆಗಳಲ್ಲಿ ಕಾರ್ಡ್ ಪ್ರಯೋಜನಗಳು ಲಭ್ಯ.
ಹೆಚ್ಚಿನ ವಿವರಗಳಿಗಾಗಿ www.manipalhealthcard.com ಗೆ ಭೇಟಿ ನೀಡಿ ಅಥವಾ 99808 54700 / 0820-2923748 ಸಂಪರ್ಕಿಸಿ. ಕಾರ್ಡ್ ಸ್ಥಿತಿ ಪರಿಶೀಲನೆಗೆ 88675 79797 ಗೆ ಮಿಸ್ಡ್ ಕಾಲ್ ನೀಡಿ. ನೋಂದಣಿಗೆ ನಿಮ್ಮ ಸ್ಥಳೀಯ ಮಣಿಪಾಲ ಆರೋಗ್ಯ ಕಾರ್ಡ್ ಪ್ರತಿನಿಧಿಗಳನ್ನೂ ಸಂಪರ್ಕಿಸಬಹುದು.

