ಹಿರಿಯ ಕಲಾವಿದ ಡೊಂಬಯ ಬದ್ಯಾರ್ ಅವರಿಗೆ ರಂಗ ಗೌರವ
ಬೆಂಗಳೂರು : ಬಿಇಎಲ್ ಲಲಿತಕಲಾ ಸಂಘದ ವತಿಯಿಂದ ಆಯೋಜಿಸಲಾಗಿದ್ದ 55ನೇ ಬಹುಭಾಷಾ ನಾಟಕ ಸ್ಪರ್ಧೆಯಲ್ಲಿ ಬಿಇಎಲ್ ದಕ್ಷಿಣ ಕನ್ನಡಿಗರ ಸಂಘದ ಕಲಾವಿದರು ಅಭಿನಯಿಸಿದ ಸಾಮಾಜಿಕ ತುಳು ನಾಟಕ ‘ಪನರೆ ಪೋವೊಡ್ಚಿ’ ಅಕ್ಟೋಬರ್ 29ರಂದು ಜಾಲಹಳ್ಳಿಯ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡಿತು.
ಸಂತೋಷ್ ಪಲಿಮಾರ್ ಅವರ ರಚನೆಯಲ್ಲಿ, ಇಸ್ಮಾಯಿಲ್ ಜಿ.ಕೆ. ಅವರ ನಿರ್ದೇಶನದಲ್ಲಿ ಮೂಡಿಬಂದ ನಾಟಕವು ಪ್ರೇಕ್ಷಕರ ಗಮನ ಸೆಳೆಯಿತು. ಬಿಇಎಲ್ ದಕ್ಷಿಣ ಕನ್ನಡಿಗರ ಸಂಘದ ಕಲಾವಿದರು ತಮ್ಮ ಅಭಿನಯದ ಮೂಲಕ ತುಳು ರಂಗಭೂಮಿಯ ಸೊಗಡನ್ನು ಅನಾವರಣಗೊಳಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ರಂಗಕಲಾವಿದ ಡೊಂಬಯ ಬದ್ಯಾರ್ ಅವರನ್ನು ಬಿಇಎಲ್ ಲಲಿತಕಲಾ ಸಂಘದ ವತಿಯಿಂದ ರಂಗ ಗೌರವ ನೀಡಿ ಸನ್ಮಾನಿಸಲಾಯಿತು.
ತುಳು ಭಾಷೆ, ಸಂಸ್ಕೃತಿ ಹಾಗೂ ರಂಗಕಲೆಯನ್ನು ಬೆಂಗಳೂರಿನಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಬಿಇಎಲ್ ದಕ್ಷಿಣ ಕನ್ನಡಿಗರ ಸಂಘದ ಕಲಾವಿದರ ಈ ಪ್ರಯತ್ನ ಗಮನಾರ್ಹವಾಗಿತ್ತು. ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು ಹಾಗೂ ತುಳು ನಾಟಕಾಸಕ್ತರು ಭಾಗವಹಿಸಿದ್ದರು.

