ಸೈಲಸ್ ಪದವಿ ಪೂರ್ವ ಕಾಲೇಜಿನ 2024-2025 ರ ಪ್ರಥಮ ತಂಡ ಈ ಶೈಕ್ಷಣಿಕ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ತೋರಿದೆ. ಈ ಪ್ರಯುಕ್ತ ವಿದ್ಯಾರ್ಥಿಗಳನ್ನು ಅವರ ಪೋಷಕರ ಸಮ್ಮುಖದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಆರ್ ಎಸ್ ಮಾಬೆನ್ ವಿಶೇಷ ರೀತಿಯಲ್ಲಿ ಸನ್ಮಾನಿಸಿ ಆಶೀರ್ವದಿಸಿದರು . ಕಾಲೇಜಿ ಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಭವಿಷ್ಯ ಉಜ್ವಲವಾಗಲಿ , ಗುರಿ ಮುಟ್ಟುವ ತನಕ ಛಲ ಬಿಡದೆ ದಿಟ್ಟತನದಿಂದ ಮುನ್ನುಗುವಂತೆ ಹಾಗು ವಿಜಯಶಾಲಿಗಳಲಿ ಎಂದು ಕಾಲೇಜಿ ನ ಪ್ರಾಂಶುಪಾಲರಾದ ಡಾ. ಜಾರ್ಜ್ ಕೆ ಇವರು ಹೃತ್ಪೂರ್ವಕವಾಗಿ ಹಾರೈಸಿದರು. ಕಾಲೇಜಿನ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಪುರಸ್ಕ್ರತಗೊಂಡ ವಿದ್ಯಾರ್ಥಿಗಳ ಪರವಾಗಿ ಇತನ್ ಹಾಗು ಸಹನ ಬಾನು ಮಾತನಾಡಿ ಸಂಸ್ಥೆಯ ಸೌಲಭ್ಯಗಳು, ಗ್ರಂಥಾಲಯ , ಪ್ರಯೋಗಾಲಯಗಳು, ಕ್ರೀಡಾಂಗಣ, ಹವಾನಿಯಂತ್ರಿತ ವರ್ಗಕೋಣೆ, ವಿರಾಮ ವೇಳೆಯ ಸೌಲಭ್ಯಗಳು ಹಾಗು ಉಪನ್ಯಾಸಕರ ಪ್ರೋತ್ಸಾಹ , ಸಹಕಾರ ಹಾಗು ಮಾರ್ಗದರ್ಶನವನ್ನು ನೆನೆದು ಭಾವುಕತೆಯಿಂದ ಕೃತಜ್ಞತೆ ಸಲ್ಲಿಸಿದರು, ಹಾಗು ಈ ಸಾಧನೆಗೆ ಸಹಕರಿಸಿದ ಪ್ರೋತ್ಸಾಹಕರನ್ನು ವಂದಿಸಿದರು.
ಸಾಧಕರಿಗೆ ಸನ್ಮಾನ ಸಮಾರಂಭ ಸೈಲಸ್ ಪದವಿ ಪೂರ್ವ ಕಾಲೇಜು ಉಡುಪಿ
RELATED ARTICLES