ಸೋರಿಕೆಯಾದ ವರದಿ ಪ್ರಕಾರ ಕ್ರೈಸ್ತರು ರಾಜ್ಯದಲ್ಲಿ ಕೇವಲ 12 ಲಕ್ಷ ಜನ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರದಿಯು ಸಂಪೂರ್ಣ ಸುಳ್ಳು ಎಂದು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಸುಮಾರು 30 ಲಕ್ಷಕ್ಕಿಂತಲೂ ಅಧಿಕ ಕ್ರೈಸ್ತರು ವಾಸವಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ರಾಜ್ಯ ಸರಕಾರ ಕೂಡಲೇ ಹೊಸ ಆಯೋಗ ರಚಿಸಿ ಜನಾಂಗಶಾಸ್ತ್ರದ (ಇಥನೋಗ್ರಾಫಿಕ್ ಸ್ಟಡಿ) ಅನ್ವಯ ಕೇವಲ ಕ್ರೈಸ್ತ ಸಮುದಾಯದ ಜಾತಿ ಗಣತಿ ಮಾಡಿಸಬೇಕೆಂದು ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ವಿನಂತಿಸುತ್ತದೆ.
ರಾಜ್ಯದ ಎಲ್ಲಾ ಬಿಷಪರು ಮತ್ತು ರಾಜ್ಯದ ಎಲ್ಲಾ ಕ್ರೈಸ್ತ ಸಂಘಟನೆಗಳು ಒಗ್ಗಟ್ಟಾಗಿ ಈ ಜಾತಿ ಗಣಿತಿಯನ್ನು ತಿರಸ್ಕರಿಸಬೇಕೆಂದು ರುಡಾಲ್ಫ್ ಡಿಸೋಜ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.