Thursday, May 1, 2025
Homeಉಡುಪಿವಿದ್ಯಾರ್ಥಿಗಳ ಮಾದಕ ವ್ಯಸನ ತಡೆಗೆ ಮುಲ್ಕಿ ವಿಜಯ ಕಾಲೇಜಿನಲ್ಲಿ ಜಾಗೃತಿ ಜಾಥಾ

ವಿದ್ಯಾರ್ಥಿಗಳ ಮಾದಕ ವ್ಯಸನ ತಡೆಗೆ ಮುಲ್ಕಿ ವಿಜಯ ಕಾಲೇಜಿನಲ್ಲಿ ಜಾಗೃತಿ ಜಾಥಾ

ಶೇಕಡಾ 90 ,ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತಿರುವುದು ಅಘಾತಕಾರಿ ಅಂಶ ಅಗಿದೆ, ಮಾದಕ ಮುಕ್ತ ರಾಜ್ಯವಾಗಲು ಎಲ್ಲಾರ ಸಹಕಾರ ಅಗತ್ಯ :- ಪೋಲಿಸ್ ಠಾಣಾಧಿಕಾರಿ ಪ್ರಸನ್ನ ಎಮ್.ಎಸ್


“ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧಡೆ ಮಾದಕ ವ್ಯಸನ ತಡೆಗಟ್ಟುವಿಕೆ ಹಾಗು ರಸ್ತೆ ಸುರಕ್ಷತೆಯ ಬಗ್ಗೆ ವಿಭಿನ್ನ ರೀತಿಯಲ್ಲಿ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಶ್ರಮ ವಹಿಸಲು ಬದ್ದರಾಗಿದ್ದೇವೆ. ” :- ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ(ರಿ) ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್

ಮುಲ್ಕಿ : ” ವಿವಿಧ ರೀತಿಯ ಮಾದಕ ವಸ್ತುಗಳು ಬಳಕೆಯಾಗುತಿದ್ದು. ಮಾದಕ ವಸ್ತುಗಳಿಗೆ ಅತೀ ಹೆಚ್ಚಾಗಿ ವಿದ್ಯಾರ್ಥಿಗಳು ಬಲಿಯಾಗುತಿದ್ದು. ಅದರಲ್ಲಿಯೂ ಇಂಜಿನಿಯರ್ ಹಾಗು ವ್ಯೆದ್ಯಕೀಯ ವಿದ್ಯಾರ್ಥಿಗಳು ಮಾದಕ ಮಾರಟಗಾರರು ಗುರಿಯಾಗಿಸಿದ್ದಾರೆ.. ಶೇಕಡಾ 90 ರಷ್ಟು ಕ್ರಿಮಿನಲ್ ಪ್ರಕರಣಗಳು ಮಾದಕ ವ್ಯಸನಿಗಳಿಂದ ನಡೆಯುತಿರುವುದು ಅಘಾತಕಾರಿದೆ. ನಮ್ಮ ರಾಜ್ಯ ಮಾದಕ ಮುಕ್ತ ರಾಜ್ಯವಾಗಲು ಎಲ್ಲಾರೂ ಸಹಕರಿಸ ಬೇಕು.
ತಲಪಾಡಿಯಿಂದ ಶಿರೂರು ವರಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗುವ ಅಘಾತದಿಂದ ಒಂದು ವರ್ಷಕ್ಕೆ ಅರುನೂರು ಮಂದಿ ಸಾವನ್ನಪ್ಪುತ್ತಾರೆ. ಇದು ಬೇರೆ ಬೇರೆ ಕಾರಣದಿಂದ ಸಾವನ್ನಪ್ಪುವರ ಸಂಖ್ಯೆಗಿಂತ ದುಪ್ಪಟ್ಟು ಅಗಿದೆ. ಅದ್ದರಿಂದ ರಸ್ತೆ ನಿಯಮಗಳನ್ನು ತಮ್ಮ ಜೀವದ ರಕ್ಷಣೆಗಾಗಿ ಪಾಲಿಸಿ ಯಾವುದೇ ಅಧಿಕಾರಿಗಳ ಹೆದರಿಕೆಗೆ ಅಲ್ಲ ಎಂದು ಪಡುಬಿದ್ರಿ ಪೋಲಿಸ್ ಸಬ್ ಇನ್ಸ್‌ಪೆಕ್ಟರ್ ಪ್ರಸನ್ನ ಎಮ್ ಎಸ್ ನುಡಿದರು.


ಅವರು ವಿಜಯ ಕಾಲೇಜು ಮುಲ್ಕಿ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ.,ರೆಡ್ ಕ್ರಾಸ್ , ರೋವಸ್ & ರೇಂಜರ್ ಇದರ ಜಂಟಿ ಆಶ್ರಯದಲ್ಲಿ ರಚನ್ ಸಾಲ್ಯಾನ್ ನೇತೃತ್ವದ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಕರ್ನಾಟಕ ಇದರ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ನಡೆದ “ಮಾದಕ ದ್ರವ್ಯ ವ್ಯಸನ ತಡೆಗಟ್ಟುವಿಕೆ ಮತ್ತು ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ”ವನ್ನು ಉದ್ಘಾಟಿಸಿ ಮಾತನಾಡಿದರು.
“ಹೆಚ್ಚಿನ ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಿಸುವುದು ಕಂಡು ಬರುತಿದ್ದು. ಇದ್ದರಿಂದ ಪ್ರತಿದಿನ ರಸ್ತೆ ಅಘಾತಗಳು ಜಾಸ್ತಿಯಾಗುತಿದೆ. ರಸ್ತೆ ದಾಟುವಾಗ ಕೂಡಾ ನಿಯಮಗಳನ್ನು ಪಾಲಿಸದಿರುವುದು, ಮಾದಕ ವಸ್ತುಗಳನ್ನು ಮತ್ತು ಮದ್ಯಪಾನ ಸೇವಿಸಿ ವಾಹನ ಚಲಿಸುವವರ ಸಂಖ್ಯೆ ಜಾಸ್ತಿ ಯಾಗಿದೆ. ಇಂತಹ ಚಟಗಳಿಗೆ ಬಲಿಯಾಗದೆ, ಶಿಸ್ತು ಬದ್ಧ ವಾಗಿ ಬಾಳಿ, ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗ ಬೇಕೆಂದು” ಮುಲ್ಕಿ ಪೋಲಿಸ್ ಠಾಣಾಧಿಕಾರಿ ಅನಿತಾ ರವರು ಹೇಳಿದರು.
ಮುಲ್ಕಿ ವಿಜಯ ಕಾಲೇಜ್ ಪ್ರಾಂಶುಪಾಲ ಪ್ರೊ! ವೆಂಕಟೇಶ ಭಟ್ ಅಧ್ಯಕ್ಷತೆ ವಹಿಸಿದ್ದರು.
ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಸಂಸ್ಥಾಪಕ ಡಾ! ಶಿವಕುಮಾರ್ ಕರ್ಜೆ ಪ್ರಾಸ್ತಾವಿಕವಾಗಿ ಮಾತನಾಡಿದರು..
ಈ ಸಂದರ್ಭದಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಕರ್ನಾಟಕ ರಾಜ್ಯಾಧ್ಯಕ್ಷ ರಚನ್ ಸಾಲ್ಯಾನ್ ,
ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಡುಬಿದ್ರಿ ರೋಟರಿ ಪೂರ್ವ ಅಧ್ಯಕ್ಷ ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಪದಾಧಿಕಾರಿಗಳಾದ ಶಶಾಂಕ್ ಸುವರ್ಣ , ಸೌಮಿಕ್ ಶ್ರೀಯಾನ್ , ವಿಜೇತ್ ಅಚಾರ್ಯ , ಸಚಿನ್ ಕುಂದರ್ ,ಪ್ರತೀಕ್ ಶೆಟ್ಟಿ ಕಾರ್ಕಳ, ಶಶಾಂಕ್ ಆಚಾರ್ಯ, ಸುಜನ್ ಕೋಟ್ಯಾನ್ ಹೆಜ್ಮಾಡಿ , ಯಶ್ ಅಮೀನ್ ಹೆಜ್ಮಾಡಿ, ಅದಿತ್ಯ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅರುಣಾ ಕುಮಾರಿ ಸ್ವಾಗತಿಸಿದರು.ಎನ್ ಎಸ್.ಎಸ್ ಸ್ವಯಂ ಸೇವಕ ಅಭಿಷೇಕ್ ವಂದಿಸಿದರು..ಲಾವಣ್ಯ ನಿರೂಪಿಸಿದರು.

RELATED ARTICLES
- Advertisment -
Google search engine

Most Popular