ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರನ್ನು ಕರಾವಳಿಯ ಖ್ಯಾತ ಜೈನ ಜ್ಯೋತಿಷಿ ಬಿಕೆ ಸುಭಾಷ್ ಚಂದ್ರ ಜೈನ್ ಬೇಟಿ.

0
7

ಬೆಂಗಳೂರು : ಕರ್ನಾಟಕಾದ್ಯಂತ ಜನಪರ ಅಭಿವೃದ್ಧಿ ಕೆಲಸ, ಮೂಲಭೂತ ಸೌಕರ್ಯ ಮತ್ತು ಮಂಗಳೂರಿನಲ್ಲಿ ಸಚಿವ ಸಂಪುಟ ನಡೆಸುವ ಮೂಲಕ ಚರಿತ್ರೆಯನ್ನು ಸೃಷ್ಟಿಸಿವ ನಾಡಿನ ಪ್ರಖ್ಯಾತ ಮುಖ್ಯಮಂತ್ರಿ ಸನ್ಮಾನ್ಯ ಡಿ ಕೆ ಶಿವಕುಮಾರ್ ರವರನ್ನು ರಾಜ್ಯ ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಕರಾವಳಿ ತೀರದ ಪ್ರಖ್ಯಾತ ವಾಸ್ತು ಜ್ಯೋತಿಷ್ಯ ಶಾಸ್ತ್ರಜ್ಞ ಬಿ ಕೆ ಸುಭಾಷ್ ಚಂದ್ರ ಜೈನ್ ರವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಜನಪರ ಅಭಿವೃದ್ಧಿ ಕೆಲಸಗಳ ಬಗ್ಗೆ ಆಳವಾಗಿ ಚರ್ಚಿಸಿದರು ಹಾಗೂ ಸಚಿವ ಸಂಪುಟ ಸಭೆಯಲ್ಲಿ ತುಳುನಾಡಿನ ಹಲವು ದಶಕಗಳ ಕೋರಿಕೆಯಾದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಎಂಟನೇ ಪರಿಚಯದ ಹಾಗೂ ಎರಡನೇ ಆಡಳಿತ ಭಾಷೆಯನ್ನು ಮಾಡಬೇಕೆಂಬ ಕೋರಿಕೆಯನ್ನು ಮುಂದಿಟ್ಟರು.
ಹಾಗೆಯೇ ಪ್ರಸ್ತುತ ಸಂದರ್ಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದ ಮೂಲಕ ಶ್ರೀಮತಿ ಅನಿತಕ್ಕ ಸುರೇಂದ್ರಣ್ಣ ದಂಪತಿಗಳ ಮಾರ್ಗದರ್ಶನದಂತೆ ರಾಜಧಾನಿ ಬೆಂಗಳೂರಿನಲ್ಲಿ ಚಾತುರ್ಮಾಸವನ್ನು ಮಾಡುತ್ತಿರುವ ಪ್ರಖ್ಯಾತ ಜೈನಮುನಿಗಳಾದ ಅನೇಕಾಂತ ಸಾಗರ ಮಹಾರಾಜರ ಅಪೇಕ್ಷೆಯಂತೆ ಅಕ್ಟೋಬರ್ 25ನೇ ತಾರೀಕು ನಗರದ ಪ್ಯಾಲೇಸ್ ಗ್ರೌಂಡಿನಲ್ಲಿ ನಡೆಯುವ “ಬೃಹತ್ ಸಿದ್ದ ನವಗ್ರಹ ತೀರ್ತಂಕರ ಮಹಾ ಆರಾಧನಾ ಮಹೋತ್ಸವ” ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿ ಅವರನ್ನು ವೈಯಕ್ತಿಕವಾಗಿ ಆಮಂತ್ರಿಸಿದ್ದು ಖಂಡಿತ ಜೈನ ಸಮುದಾಯದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಹಾಗೂ ಸುಹಾಸ್ತಿ ಜೈನ್ ಮಿಲನ ಈ ವರ್ಷದ ಜಿನ ಸಮ್ಮಿಲನ ಕಾರ್ಯಕ್ರಮವು ದೂರದ ಶಿಖರ್ಜಿ ಯಲ್ಲಿ ನಡೆಯುವುದರಿಂದ ಶಿಖರ್ಜಿ ಯಾತ್ರೆಯ ಸಂಪೂರ್ಣ ಕಾರ್ಯಕ್ರಮದ ವಿವರಗಳ ಬ್ರೊಶರ್ ರನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮತ್ತು ಸಾಮಾಜಿಕ ಹೋರಾಟಗಾರ ಸಮಾಜ ಸೇವಕ ಮುಖಂಡ ಮಾಳ ಹರ್ಷೇಂದ್ರ ಜೈನ್, ಐಟಿ ಉದ್ಯೋಗಿ ಸುನಿತಾ ಮ್ಯಾನೇಜಸ್, ಶ್ರೀಮತಿ ರಶ್ಮಿ ಜೈನ್ ಉಪಸ್ಥಿತರಿದ್ದರು.
ವರದಿ : ಎಮ್ ಎಚ್ ಅಲೆಕ್ಸಾಂಡರ್