ಶ್ರೀ ಬಿ. ಶ್ರೀನಿವಾಸ ಬಹದ್ದೂರ್ “ಕಾಸರಗೋಡು ದಸರಾ ಕವಿ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆಯ್ಕೆ

0
7

ಸಾಹಿತ್ಯ ಸಂಘಟಕ ಶ್ರೀ ಬಿ. ಶ್ರೀನಿವಾಸ ಬಹದೂರ್ ನಿವ್ರಿತ್ತ ಜಂಟಿ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕರ್ನಾಟಕ ಸರಕಾರ ಮತ್ತು ಸ್ಥಾಪಕ ಅಧ್ಯಕ್ಷರು ಬಹದ್ದೂ ರ್ ಸಾಂಸ್ಕೃತಿಕ ಪ್ರತಿಷ್ಠಾನ ಮೈಸೂರು ಇವರನ್ನು ಕಾಸರಗೋಡು ದಸರಾ ಕವಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಅಕ್ಟೋಬರ್ 18.2026,ಭಾನುವಾರ ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನದ ಸಭಾ ವೇದಿಕೆಯಲ್ಲಿ ನಡೆಯುವ ಈ “ಕಾಸರಗೋಡು ದಸರಾ ಕವಿ ಸಮ್ಮೇಳನವನ್ನು ಕವಿವೇರಿಣ್ಯರೂ, ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕರೂ ಆದ ಡಾ. ಎಮ್. ಜಿ. ಆರ್. ಅರಸ್ ಮೈಸೂರು ಉದ್ಘಾಟಿಸಲಿದ್ದಾರೆ. ವಿಚಾರ ಮಂಡನೆ, “ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ ಪ್ರದಾನ, ಮೈಸೂರಿನ ಖ್ಯಾತ ಕವಿ ಜಯಪ್ಪ ಹೊನ್ನಾಳಿ,.. ಜಯಕವಿ ಮೈಸೂರು ಇವರ ಘನ ಅದ್ಯಕ್ಷತೆಯಲ್ಲಿ ರಾಷ್ಟ್ರ ಮಟ್ಟದ ಕವಿಗೋಷ್ಠಿ ಯಲ್ಲಿ ಆಯ್ದ 60ಕ್ಕೂ ಮಿಕ್ಕ ಕವಿಗಳು ಕವನ ಪ್ರಸ್ತುತ ಪಡಿಸಲಿದ್ದಾರೆ. ಭಾಗವಹಿಸುವ ಎಲ್ಲ ಕವಿಗಳಿಗೆ “ಕಾಸರಗೋಡು ದಸರಾ ಕವಿ ಸಾಧಕ ಸನ್ಮಾನ ದೊರೆಯಲಿದೆ. ಸಮ್ಮೇಳನ ಸರ್ವಾಧ್ಯಕ್ಷರೀಗೆ ಉದ್ಘಾಟಕರೀಗೆ ಹಾಗೂ ಕವಿಗೋಷ್ಠಿ ಅಧ್ಯಕ್ಷರನ್ನು ಕನ್ನಡ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಗುವುದು. ಭಾಗವಹಿಸುವ ಎಲ್ಲ ಅಭ್ಯಾಗತರು 18ಅಕ್ಟೋಬರ್ ಭಾನುವಾರ ಬೆಳಿಗ್ಗೆ 11ರ ಮುಂಚಿತವಾಗಿ ಸಮ್ಮೇಳನ ನಗರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಮುನ್ನಾ ದಿನ ಬರುವವರು ಮೊದಲೇ ಸಂಪರ್ಕಿಸಿದರೆ ವಸತಿ ವ್ಯವಸ್ಥೆ ಮಾಡಲಾಗುವುದು. ಈ ಕಾರ್ಯಕ್ರಮಕ್ಕೆ ಯಾವುದೇ ಶುಲ್ಕವಿರುವುದಿಲ್ಲ, ಡಾ. ವಾಮನ್ ರಾವ್ ಬೇಕಲ್ -ಸಂದ್ಯಾ ರಾಣಿ ಟೀಚರ್ ಸಾರತ್ಯದ ಕನ್ನಡ ಭವನ ಗ್ರಂಥಾಲಯ (ರಿ.)223/2008.ಹಾಗೂ ಕನ್ನಡ ಭವನ ಪ್ರಕಾಶನ ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕದ ಸಹಕಾರದಲ್ಲಿ 2007ರಿಂದ ಆಯೋಜಿಸುತ್ತ ಬಂದಿರುವ “ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ -11.10.2026.ರಿಂದ 20.10.2026ರ ವರೆಗಿನ 10 ದಿನಗಳ ಈ ಕಾಸರಗೋಡು ದಸರಾ ಕಾರ್ಯಕ್ರಮದ ಬಾಗವಾಗಿ ನಡೆಯಲಿರುವ ಈ ಕವಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಶ್ರೀ ಬಿ. ಶ್ರೀನಿವಾಸ್ ಬಹದ್ದೂರ್ ಆಯ್ಕೆ ಮಾಡಿರುವುದಾಗಿ ಕಾಸರಗೋಡು ದಸರಾ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಪಾಂಗೋಡು ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ಸಾಂಸ್ಕೃತಿಕ ಘಟಕ ಅಧ್ಯಕ್ಷರಾದ ಪಾಂಗೋಡು ಪ್ರವೀಣ್ ನಾಯಕ್ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.