ಶ್ರೀ ಲೋಕನಾಥೇಶ್ವರ ದೇವಸ್ಥಾನ ಬದ್ಯಾರು ಶಿರ್ಲಾಲು ಬೆಳ್ತಂಗಡಿ ತಾಲೂಕು, ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಸಂದರ್ಭದಲ್ಲಿ ಧಾರ್ಮಿಕ ಸಭೆ ನಡೆಯಿತು .
ಸಭೆಯ ಅಧ್ಯಕ್ಷತೆಯನ್ನು ಶ್ರೀಧರ ಪೂಜಾರಿ ಆಡಳಿತ ಮುಖ್ಯಸ್ಥರು ವಹಿಸಿದರು ಮುಖ್ಯ ಅತಿಥಿಗಳಾಗಿ ಸತ್ಯದೇವತೆ ಆಡಳಿತದಾರರಾದ ಶಿವಪ್ರಸಾದ್ ಅಜಿಲರು ಪ್ರಗತಿಪರ ಕೃಷಿಕರಾದ ಎಂ ಗಂಗಾಧರ ಮಿತ್ತಮಾರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಖ್ಯಾತ ಕಂಬಳ ಆಟಗಾರ ಸತೀಶ್ ದೇವಾಡಿಗ ಆಂಬುಲೆನ್ಸ್ ಚಾಲಕರಾದ ಅಶ್ವತ್ ಕುಲಾಲ್ ದೇವಸ್ಥಾನದ ಅರ್ಚಕರಾದ ಸೂರ್ಯನಾರಾಯಣ ರಾವ್ ಭಜನಾ ಮಂಡಳಿಯ ಅಧ್ಯಕ್ಷರಾದ ಪ್ರಭಾಕರ ನಾಯ್ಕ ಮಹಿಳಾ ಕೇಂದ್ರದ ಅಧ್ಯಕ್ಷರಾದ ರಮಣಿ ಕಾಯರ್ ಮಜಲು ಭಾಗವಹಿಸಿದ್ದರು .
ಈ ಸಂದರ್ಭದಲ್ಲಿ ನಾಲ್ಕು ಜನರಿಗೆ ಸನ್ಮಾನ ಮಾಡಲಾಯಿತು , ಆಡಳಿತ ಸಮಿತಿಯ ಸದಸ್ಯರು ಭಜನಾ ಮಂಡಳಿಯ ಅಧ್ಯಕ್ಷರು ಸರ್ವ ಸದಸ್ಯರು ಶ್ರೀದೇವಿ ಮಹಿಳಾ ಕೇಂದ್ರದ ಅಧ್ಯಕ್ಷರು ಸರ್ವ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತಿ ಇದ್ದರು.

