ಇತಿಹಾಸ ಪ್ರಸಿದ್ಧ ಚೆಂಡೆ ಕಲ್ಲುರ್ಟಿ ದೈವಸ್ಥಾನದಲ್ಲಿ ಹರಕೆಯ ಕೋಲ ಅತ್ಯಂತ ಸಾಂಪ್ರದಾಯಿಕವಾಗಿ ಇತ್ತೀಚೆಗೆ ದೊಂದಿ ಬೆಳಕಿನಲ್ಲಿ ನಡೆಯಿತು. ನಂತರ ಅನ್ನಸಂತರ್ಪಣೆ ಹಾಗೂ ಪಿರಿ ಅಗೆಲು ಕಾರ್ಯಕ್ರಮ ನ್ಯಾಯವಾದಿ ಆಡಳಿತದಾರರಾದ ಬೋಳ್ನಾಡುಗುತ್ತು ಶ್ರೀಧರ ಶೆಟ್ಟಿ ಪುಳಿಂಚ ರವರ ನೇತೃತ್ವದಲ್ಲಿ ಜರುಗಿತು.

ಈ ಸಂದರ್ಭದಲ್ಲಿ ಕೋರೊಟ್ಟುಗುತ್ತು ದೇವಕಿ ಎಂ. ಶೆಟ್ಟಿ, ಮೂಡಾಯುರುಗುತ್ತು ರತ್ನಾಕರ ಶೆಟ್ಟಿ, ಪ್ರತಿಭಾ ಶ್ರೀಧರ ಶೆಟ್ಟಿ ಪುಳಿಂಚ, ಶಿಕ್ಷಕರಾದ ರಾಧಕೃಷ್ಣ ಅಡ್ಯಂತಾಯ ಮತ್ತು ಕೃಷ್ಣಪ್ಪ ಸಾಲ್ಯಾನ್, ಪ್ರಮುಖರಾದ ಮೋಹನ ಪಿ.ಎಸ್, ದಿನೇಶ್ ಅಮ್ಟೂರು, ಕುಲ್ಯಾರು ನಾರಾಯಣ ಶೆಟ್ಟಿ, ಆನಂದ ಶೆಟ್ಟಿ ಕಾಂಪ್ರಬೈಲು, ದಿನೇಶ್ ಕಲ್ಲಡ್ಕ, ನಿವೃತ್ತ ಪೋಲಿಸ್ ಅಧಿಕಾರಿ ಜಗನ್ನಾಥ ಶೆಟ್ಟಿ, ಜಗನ್ನಾಥ ದೇವಾಡಿಗ, ಸತೀಶ್ ರೈ ಹುಣಸೂರು, ವಕೀಲರಾದ ವಿಜಯ ಕುಮಾರ್ ಎಂ.ಸಿ, ಅರುಣ ಬಿ.ಪಿ, ಸುಮಂಗಲ, ವಿವೇಕಾನಂದ ಪ್ರೆಂಡ್ಸ್‌ನ ಸತೀಶ್ ಪೂಜಾರಿ ಚೆಂಡೆ ಹಾಗೂ ಸದಸ್ಯರು, ಚೆಂಡೆ ಪ್ರೆಂಡ್ಸ್‌ನ ದಿವಾಕರ ಪೂಜಾರಿ ಹಾಗೂ ಸದಸ್ಯರು, ಸೀತಾರಾಮ ಪೂಜಾರಿ ಚೆಂಡೆ, ದೈವಪಾತ್ರಿ ಕೇಶವ ಪೂಜಾರಿ ಗುಂಡೂರು, ಲೋಕನಾಥ ಪೂಜಾರಿ ಕುದ್ರೆಬೆಟ್ಟು, ಮಹಾಬಲ ಕುದ್ರೆಬೆಟ್ಟು, ರಮೇಶ್ ಪಂಬದ, ಚಂದ್ರಹಾಸ ಪೂಜಾರಿ ಚೆಂಡೆ, ಪುಳಿಂಚ ಲಾ ಅಸೋಸಿಯೇಟ್ಸ್ ಹಾಗೂ ಪುಳಿಂಚ ಚಿಟ್ಸ್ ನ ಎಲ್ಲಾ ಸದಸ್ಯರು ಊರ ಪರಊರ ಪ್ರಮುಖರು ಉಪಸ್ಥಿತರಿದ್ದರು.

