ಬಂದಾರು : ಬಂದಾರು ಗ್ರಾಮದ ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪರಮಪೂಜ್ಯ ಧರ್ಮಸ್ಥಳ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಹಾಗೂ ಗೌರವಾಧ್ಯಕ್ಷರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯರವರ ಮಾರ್ಗದರ್ಶನದೊಂದಿಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತoತ್ರಿಯವರ ನೇತೃತ್ವದಲ್ಲಿ ಶ್ರೀ ಸದಾಶಿವ ದೇವರ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ಜಾತ್ರೋತ್ಸವ ಪ್ರಯುಕ್ತ ನಾಳೆ ಎಪ್ರಿಲ್ 08 ಮಂಗಳವಾರ ಬೆಳಗ್ಗೆ 8.00 ರಿಂದ ಉತ್ಸವ ಬಲಿ, ವಿಶೇಷ ಸುತ್ತುಗಳು, ಬೆಳಗ್ಗೆ 10.30 ರಿಂದ ದರ್ಶನ ಬಲಿ, ನಂತರ ಬಟ್ಟಲು ಕಾಣಿಕೆ, ಬೆಳಗ್ಗೆ 11.00 ರಿಂದ ಅಪ್ಪಂಗಾಯಿ, ಶ್ರೀ ದೇವರಿಗೆ ಕಲಶಾಭಿಷೇಕ, ರುದ್ರಾಭಿಷೇಕ, ತುಲಾಭಾರ ಸೇವೆ, ಮಧ್ಯಾಹ್ನ 12.00 ಕ್ಕೆ ಮಹಾಪೂಜೆ, ನಂತರ ಪಲ್ಲಪೂಜೆ, ಆರಾಟಕ್ಕೆ ಕುದಿ ಕರೆಯುವುದು, ಪ್ರಸಾದ ವಿತರಣೆ, ಮಧ್ಯಾಹ್ನ 1.00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 3.30 ರಿಂದ 5.30 ರ ವರೆಗೆ ವಿವಿಧ ಭಜನಾ ಮಂಡಳಿ ಗಳಿಂದ ಭಜನಾ ಸೇವೆ, ಸಂಜೆ 6.30 ರಿಂದ ತೇರ ಕಲಶ, ಉತ್ಸವ ಬಲಿ, ವಿಶೇಷ ಸುತ್ತುಗಳು, ನಂತರ ರಕ್ತೇಶ್ವರಿ ದೈವದ ನೆಮೋತ್ಸವ, ರಾತ್ರಿ 10.30 ಕ್ಕೆ ಶ್ರೀ ಸದಾಶಿವ ದೇವರ ರಥೋತ್ಸವ, ನಂತರ ರಕ್ತೇಶ್ವರಿ ದೈವದ ಸಹಿತ ಶ್ರೀ ದೇವರ ಮೂಲ ಕ್ಷೇತ್ರಕ್ಕೆ ಭೇಟಿ, ರಾತ್ರಿ 11.00 ಕ್ಕೆ ಶ್ರೀ ಕ್ಷೇತ್ರಕ್ಕೆ ದೇವರ ಆಗಮನ, ನಂತರ ಫಲಾಹಾರ ಮತ್ತು ಭೂತಬಲಿ, ನಂತರ ದೇವರ ಶಯನೋತ್ಸವ ಕಾರ್ಯಕ್ರಮ ಚೆಂಡೆನಾದನ, ಬ್ಯಾಂಡ್ ವಾಳಗ, ಸಿಡಿಮದ್ದು, ಜೇಂಕಾರದೊಂದಿಗೆ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ನೆರವೇರಲಿದೆ. ಭಕ್ತಾದಿಗಳು ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕಾಗಿ ವ್ಯವಸ್ಥಾಪನ ಸಮಿತಿ, ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಂದಾರು : ಬಂದಾರು – ಕುರಾಯ ಶ್ರೀ ಸದಾಶಿವ ದೇವರ ವಾರ್ಷಿಕ ಜಾತ್ರೋತ್ಸವ
RELATED ARTICLES