ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಯುಗಾದಿ ಹಬ್ಬದ ಪ್ರಯುಕ್ತ ಪ್ರತಿ ಬಡಾವಣೆಗಳ ಅವರವರ ಮನೆಗಳ ಮುಂದೆ ಉಚಿತವಾಗಿ “ಮನೆಯಂಗಳದಲ್ಲಿ ರಂಗೋಲಿ ಸ್ಪರ್ಧೆ” ಹಮ್ಮಿಕೊಂಡಿದ್ದು ಬಹುಮಾನ ವಿಜೇತರಿಗೆ ಅವರವರ ಹೆಸರಿನಲ್ಲಿ ಅಭಿನಂದನಾ ಪತ್ರ, ಕನ್ನಡತಾಯಿ ಭವನೇಶ್ವರಿಯ ಸ್ಮರಣಿಕೆ ವಿತರಣಾ ಸಮಾರಂಭದಲ್ಲಿ ಇತ್ತೀಚಿಗೆ ಕಲಾಕುಂಚ ಕಚೇರಿಯ ಆವರಣದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕ ಮಾತನಾಡಿ, ಅಡಿಗೆ ಮನೆಗೆ ಸೀಮಿತರಾದ ಮಹಿಳೆಯರಿಗೆ ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ಪ್ರತಿಭಾವಂತ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸೂಕ್ತವಾದ, ಮುಕ್ತವಾದ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಕಳೆದ ೩೫ ವರ್ಷಗಳಿಂದ ನಿರಂತರವಗಿ, ಕಲೆ, ಸಾಹಿತ್ಯ, ಸಂಗೀತ, ಯಕ್ಷಗಾನ ಸಾಂಸ್ಕೃತಿಕ ಚಟುವಟಿಕೆ ಕಲಾಕುಂಚ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಲಾಕುಂಚ ಡಿ.ಸಿ.ಎಂ.ಟೌನ್‌ಶಿಪ್ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಶಾರದಮ್ಮ ಶಿವನಪ್ಪ, ಎಂ.ಸಿ.ಸಿ. ಬ್ಲಾಕ್ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಪ್ರಭಾ ರವೀಂದ್ರ, ಸಿದ್ಧವೀರಪ್ಪ ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಲಲಿತಾ ಕಲ್ಲೇಶ್, ವಿದ್ಯಾನಗರ ಶಾಖೆಯ ಅಧ್ಯಕ್ಷರಾದ ರಾಜಶೇಖರ ಬೆನ್ನೂರು, ಕೆ.ಬಿ.ಬಡಾವಣೆ ಶಾಖೆಯ ಅಧ್ಯಕ್ಷರಾದ ವಿ.ಕೃಷ್ಣಮೂರ್ತಿ ಮುಂತಾದವರು ಮಾತನಾಡಿ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾವರಿಗೆ ಅಭಿನಂದನೆ ಕೋರಿದರು.
ಶ್ರೀಮತಿ ಮಂಜುಳಾರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಸಮಾರಂಭದಲ್ಲಿ ಅಚ್ಚುಕಟ್ಟಾಗಿ ನಿರೂಪಣೆಯನ್ನು ಶ್ರೀಮತಿ ಶಿಲ್ಪಾ ಉಮೇಶ್ ನಡೆಸಿಕೊಟ್ಟರು. ಸ್ವಾಗತ ಮಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಉಮೇಶ್‌ರವರು ಕೊನೆಯಲ್ಲಿ ವಂದಿಸಿದರು.