ಬಂದಾರು : ಸಾರ್ವಜನಿಕರಿಗೆ ಆಟೋಟ ಸ್ಪರ್ಧೆಗಳಲ್ಲಿ ಶುಭ ಹಾರೈಸಿದ ಹರೀಶ್ ಪೂಂಜ

0
22

ಬಂದಾರು : ಬಂದಾರು ಗ್ರಾಮ ನಾಗಶ್ರೀ ಗೆಳೆಯರ ಬಳಗ ಕೆಲೆಂಜಿಮಾರು, ಇದರ ವಾರ್ಷಿಕೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆ ಪೆಲತ್ತಿಮಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬಂದಾರು ಕೆಲೆಂಜಿಮಾರು ನಾಗಶ್ರೀ ಗೆಳೆಯರ ಬಳಗದ ಅಧ್ಯಕ್ಷರಾದ ಪುಷ್ಪರಾಜ್ ಗೌಡ ಕೆಲೆಂಜಿಮಾರು, ಕಾರ್ಯದರ್ಶಿ ಲೋಕೇಶ್ ಬಿ. ಬಂದಾರು, ಬಂದಾರು ಪಂಚಾಯತ್ ಸದಸ್ಯರಾದ ಚೇತನ್ ಗೌಡ ಪಾಲ್ತಿಮಾರ್, ಹಾಗೂ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here