ಮುಂಬೈ,: ಭಾರತದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ ತನ್ನ ಮನೆ ಸಾಲ ಬಡ್ಡಿದರವನ್ನು ಮತ್ತಷ್ಟು ಕಡಿತಗೊಳಿಸಿ 7.45% ವಾರ್ಷಿಕಕ್ಕೆ* ತಕ್ಷಣದಿಂದ ಜಾರಿಗೆ ಬರುವಂತೆ ಘೋಷಿಸಿದೆ. ಜೊತೆಗೆ, ಪ್ರೊಸೆಸಿಂಗ್ ಫೀ (Processing Fee) ಅನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.ಈ ನಿರ್ಧಾರವು ಮನೆ ಸಾಲದ ಗ್ರಾಹಕರಿಗೆ ಸಾಲಗಳನ್ನು ಹೆಚ್ಚಿನ ಲಭ್ಯತೆಯೊಂದಿಗೆ
ನೀಡುವ ಹಾಗೂ ಕ್ರೆಡಿಟ್ ವೃದ್ಧಿಸುವ ನಿಟ್ಟಿನಲ್ಲಿ ಬ್ಯಾಂಕ್ ಪಡೆದಿರುವ ಬದ್ಧತೆಗೆ ಅನುಗುಣವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ನೀತಿ ದರ ಸಡಿಲಿಕೆಗೆ ಪ್ರತಿಕ್ರಿಯೆಯಾಗಿ, ಜೂನ್‌ನಲ್ಲಿ ಗೃಹ ಸಾಲದ ಬಡ್ಡಿದರಗಳನ್ನು ವಾರ್ಷಿಕ 8.00% ರಿಂದ 7.50% ಕ್ಕೆ ಇಳಿಸಿದ ನಂತರ ಈ ಇತ್ತೀಚಿನ ದರ ಕಡಿತ ಮಾಡಲಾಗಿದೆ.
ಈ ಕುರಿತಾಗಿ, ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಸಂಜಯ್ ಮುದಾಲಿಯಾರ್ ಅವರು ಹೇಳಿದರು:”ಸಂಬಂಧಿತ ನಾಗರಿಕರಿಗೆ ಮನೆಮಾಲೀಕತ್ವವನ್ನು ಸುಲಭಗೊಳಿಸಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಮನೆ ಸಾಲದ ಬಡ್ಡಿದರದ ಈ ಇತ್ತೀಚಿನ ಕಡಿತವು, ಜನರ ಆಶಯಗಳನ್ನು ಬೆಂಬಲಿಸುವ ಜೊತೆಗೆ ಕ್ರೆಡಿಟ್ ವೃದ್ಧಿಸಲು ಸಹಕಾರಿಯಾಗಿದೆ. ಹಣಕಾಸು ನೀತಿ
(monetary policy) ಪರಿಸ್ಥಿತಿಗೆ ಅನುಗುಣವಾಗಿ ನಾವು ನಮ್ಮ ಸಾಲ ನೀಡುವ ಧೋರಣೆಯನ್ನು ಹೊಂದಿಸಿಕೊಳ್ಳುತ್ತಿದ್ದೇವೆ, ಇದರಿಂದ ಗ್ರಾಹಕರಿಗೆ ಬಡ್ಡಿದರದ ಲಾಭ ಪಾಸಾಗುತ್ತವೆ ಮತ್ತು ಸಾಲಗಳ ಬೇಡಿಕೆಯನ್ನು ಉತ್ತೇಜಿಸುತ್ತವೆ.” ಬ್ಯಾಂಕ್ ಆಫ್ ಬರೋಡಾ ಯ ಸ್ಪರ್ಧಾತ್ಮಕ ಮನೆ ಸಾಲ ಸೌಲಭ್ಯಗಳು ಸುಗಮವಾದ ಡಿಜಿಟಲ್ ಅರ್ಜಿ ಪ್ರಕ್ರಿಯೆಯೊಂದಿಗೆ ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ವೆಬ್‌ಸೈಟ್ ಅಥವಾ ಹತ್ತಿರದ ಶಾಖೆಗೆ ಭೇಟಿ ನೀಡಿ ಮನೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. *ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.
ಬ್ಯಾಂಕ್ ಆಫ್ ಬರೋಡಾ ಬಗ್ಗೆ
ಬ್ಯಾಂಕ್ ಆಫ್ ಬರೋಡಾ ಅನ್ನು 1908ರ ಜುಲೈ 20ರಂದು ಸರ್ ಮಹಾರಾಜಾ ಸಯಾಜಿರಾವ್ ಗಾಯಕವಾಡ್ III ಅವರಿಂದ ಸ್ಥಾಪಿಸಲಾಯಿತು. ಇತ್ತೀಚೆಗೆ, ಈ ಬ್ಯಾಂಕ್ ಭಾರತದಲ್ಲಿ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಒಂದಾಗಿ ಪರಿಣಮಿಸಿದೆ. 63.97% ಹಂಚಿಕೆಯನ್ನು ಭಾರತ ಸರ್ಕಾರಹೊಂದಿದೆ, ಅಂದರೆ ಇದು ಬಹುಪಾಲು ಸರ್ಕಾರಿ ಮಾಲಿಕತ್ವದಲ್ಲಿದೆ.ಬ್ಯಾಂಕ್ ಆಫ್ ಬರೋಡಾ ತನ್ನ 165 ಮಿಲಿಯನ್‌ಕ್ಕೂ ಅಧಿಕ ಗ್ರಾಹಕರನ್ನು, ಸುಮಾರು 60,000 ಟಚ್‌ಪಾಯಿಂಟ್‌ಗಳು, 17 ರಾಷ್ಟ್ರಗಳು ಮತ್ತು 5 ಖಂಡಗಳಲ್ಲಿ, ಜೊತೆಗೆ ತನ್ನ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸೇವೆ ಸಲ್ಲಿಸುತ್ತಿದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಎಲ್ಲಾ ಬ್ಯಾಂಕಿಂಗ್ ಉತ್ಪನ್ನಗಳು ಹಾಗೂ ಸೇವೆಗಳನ್ನು ಸುಲಭ ಮತ್ತು ತೊಂದರೆರಹಿತ ರೀತಿಯಲ್ಲಿ ಒದಗಿಸುತ್ತವೆ.ಬ್ಯಾಂಕ್‌ನ ದೃಷ್ಟಿಕೋಣವು ತನ್ನ ವೈವಿಧ್ಯಮಯ ಗ್ರಾಹಕವರ್ಗದ ಆಶಯಗಳನ್ನು ಪೂರೈಸುವಂತಿದ್ದು, ಪ್ರತಿ ವ್ಯವಹಾರದಲ್ಲೂ ವಿಶ್ವಾಸ ಮತ್ತು ಭದ್ರತೆ ಬಿಂಬಿಸಲು ಶ್ರಮಿಸುತ್ತಿದೆ.